‘ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ರಾಮನಗರದಲ್ಲಿ ಇದ್ದಕ್ಕಿದ್ದಂತೆ ಡಿಕೆ ಶಿವಕುಮಾರ್ ಹಾಡಿದ್ದು ಏಕೆ?
ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ ಎಂದ ಡಿ ಕೆ ಶಿವಕುಮಾರ್, 14 ನೇ ತಾರಿಖಿನಿಂದ ಭಾಗ್ಯದ ಲಕ್ಷ್ಮಿ ಬಾರಮ್ಮ. ನಮಮ್ಮ ಭಾಗ್ಯದ ಲಕ್ಷ್ಮಿ ಬಾರಮ್ಮ ಆಗುತ್ತದೆ ಎಂದು ಡಿಕೆ ಶಿವಕುಮಾರ್ ಹಾಡಿದರು.
ರಾಮನಗರದಲ್ಲಿ (Ramanagara) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (Karnataka DCM DK Shivakumar) ರಾಜ್ಯದಲ್ಲಿನ ಪ್ರಸ್ತುತ ಬೆಳವಳಿಗೆಗಳ ಬಗ್ಗೆ ಮಾತನಾಡಿದ್ದಾರೆ. ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಉಚಿತ ಸೌಲಭ್ಯಗಳು ಮತ್ತು ಗ್ಯಾರಂಟಿ ಸ್ಕೀಮ್ಗಳಿಂದ ಏನ್ ಲಾಭ ? ಇದೊಂದು ದೊಡ್ಡ ಪ್ರಶ್ನೆ. ನಾನು ಈ ಹಿಂದೆ ನಿಮ್ಮ ಲಾಭದ ಬಗ್ಗೆ ಚರ್ಚೆ ಮಾಡೊಕೆ ಹೋಗಲ್ಲ. ನಿಮಗೆ ಐದು ಗ್ಯಾರೆಂಟಿಗಳ ಬಗ್ಗೆ ಮಾತ್ ಕೊಟ್ಟಿದ್ವಿ ಮೊದಲು. ಎಲ್ಲಾಹೆಣ್ಮಕ್ಳು ಕೆ ಎಸ್ ಆರ್ ಟಿ ಬಸ್ಸಲ್ಲಿ ಓಡಾಡ್ತಾ ಇದೀರಲ್ಲಾ ಎಂದು ನೆರೆದಿದ್ದ ಮಹಿಳೆಯರಿಗೆ ಡಿ ಕೆ ಶಿವಕುಮಾರ್ ಪ್ರಶ್ನೆ ಹಾಕಿದರು. ಈ ತಿಂಗಳಿನಿಂದ ಹತ್ ಕೆ ಜಿ ಮಾತ್ ಕೊಟ್ಟಿದ್ವಿ. ಐದ್ ಕೆ ಜಿ ಕೊಡ್ತಾ ಇದೀವಿ. ಇನ್ ಐದ್ ಕೆ ಜಿ ಗೆ ದುಡ್ ಕೊಡ್ತಾ ಇದೀವಿ ಎಂದರು.
ಇನ್ನು ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ. ಮುಂದಕ್ಕೆ ನಿಮಗೆ ಸೊನ್ನೆ ಬಿಲ್ಲು ಬರುತ್ತದೆ. ಹಳೇ ಬಿಲ್ ಇದೆಯಲ್ಲಾ, ಅದು ಲೆಕ್ಕ ಹಾಕ್ಬಿಟ್ಟಿದ್ದಾರೆ. ಅದು ನಮ್ದಲ್ಲ.. ಅದು ಬಿಜೆಪಿದು ನಮ್ಮದು ಈ ತಿಂಗಳಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ ಎಂದು ಡಿ ಕೆ ಶಿವಕುಮಾರ್ ಮತ್ತೊಮ್ಮೆ ಭರವಸೆಯ ಮಾತುಗಳನ್ನಾಡಿದರು. ಆ ವೇಳೆ ಗೃಹಜ್ಯೋತಿ ಎನ್ರೋಲ್ ಮಾಡ್ಕೋಬೇಕು. 14 ನೇ ತಾರಿಖಿನಿಂದ ಭಾಗ್ಯದ ಲಕ್ಷ್ಮಿ ಬಾರಮ್ಮ. ನಮಮ್ಮ ಭಾಗ್ಯದ ಲಕ್ಷ್ಮಿ ಬಾರಮ್ಮ (‘Bhagyada Lakshmi Baramma Namamma Bhagyada Lakshmi Baramma’) ಎಂದು ಡಿಕೆ ಶಿವಕುಮಾರ್ ಹಾಡಿದರು.
ಆ ಚಾಮುಂಡಿ ನಿಮ್ ಮನೆಯೊಳಗೆ ಬರ್ತಾ ಇದ್ದಾಳೆ. ದುಃಖ ದೂರ ಮಾಡುವ ದೇವಿ ದುರ್ಗಾ ದೇವಿ. ಆ ದೇವಿ ಪ್ರತಿ ಹೆಣ್ಮಗಳಿಗೆ 2 ಸಾವಿರ ರೂ ಅಕೌಂಟಿಗೆ ಬರುವಂತೆ ಮಾಡಿದ್ದಾಳೆ. ಎಲ್ಲಾ ಆಧಾರ್ ಕಾರ್ಡ್ ಲಿಂಕ್ ಮಾಡ್ಕೋಬೇಕು. ಗಂಡಸರಿಗೆ ಅಕೌಂಟ್ ನಂಬರ್ ಕೊಡೊಕೆ ಹೋಗ್ಬೇಡಿ. ಕೊಟ್ರೇ ವೈನ್ ಶಾಪೇ ಗ್ಯಾರಂಟಿ ಎಂದು ರಾಮನಗರ ದಲ್ಲಿ ಡಿ ಕೆ ಶಿವಕುಮಾರ್ ಹೇಳಿದರು.
ರಾಮನಗರ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ