Hassan: ತೋಟಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ಕದ್ದ ಕಳ್ಳರು, ಕಣ್ಣೀರು ಸುರಿಸುತ್ತಿರುವ ರೈತ ಮಹಿಳೆ
ಪೊಲೀಸರಿಗೆ ದೂರು ನೀಡಿರುವುದಾಗಿ ಪಾರ್ವತಮ್ಮ ಹೇಳುತ್ತಾರೆ, ಅದರೆ ಅವರು ಕಷ್ಟಪಟ್ಟು ಬೆಳೆದ ಫಸಲು, ಶ್ರಮ ವಾಪಸ್ಸು ಸಿಕ್ಕೀತೇ?
ಹಾಸನ: ಮನೆಗಳಿಗೆ ಕನ್ನ ಹಾಕಿ ಚಿನ್ನದಾಭರಣಗಳನ್ನು ಕಳುವು ಮಾಡುವ ರಿಸ್ಕ್ ತೆಗೆದುಕೊಳ್ಳುವ ಬದಲು ಅಷ್ಟೇ ಬೆಲೆಬಾಳುವ ಟೊಮೆಟೊ ಹಣ್ಣು ಕದ್ದರಾಯ್ತು ಅಂತ ಕಳ್ಳರು ಹಾಸನ ಜಿಲ್ಲೆ ಬೇಲೂರು ತಾಲ್ಲುಕಿನ ಸೋಮನಹಳ್ಳಿ (Somanahalli) ಹೆಸರಿನ ಗ್ರಾಮದಲ್ಲಿರುವ ತೋಟವೊಂದಕ್ಕೆ ನುಗ್ಗಿ ಟೊಮೆಟೊ ಹಣ್ಣುಗಳನ್ನು ಕದ್ದುಕೊಂಡು ಹೋಗಿದ್ದಾರೆ. ಸಾಲಸೋಲ ಮಾಡಿ ಕಷ್ಟಪಟ್ಟು ಟೊಮೆಟೊ ಬೆಳೆದಿದ್ದ ಪಾರ್ವತಮ್ಮ (Parvathamma) ಹೆಸರಿನ ರೈತ ಮಹಿಳೆ ಬಂಗಾರದಂಥ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಅವರು ಹೇಳುವ ಪ್ರಕಾರ ಸುಮಾರು 3 ಲಕ್ಷ ಮೌಲ್ಯದ ಟೊಮೆಟೊ ಫಸಲನ್ನು (tomato crop) ದುಷ್ಟರು ಕದ್ದೊಯ್ದಿದ್ದಾರೆ. ತಾವು ಬೆಳೆದ ಬೆಳೆಗಳಿಗೆ ಬೆಲೆ ಸಿಗೋದಿಲ್ಲ ಪ್ರತಿ ವರ್ಷ ರೈತರು ಪರಿತಪಿಸುತ್ತಾರೆ. ಆದರೆ ಈ ಬಾರಿ ಟೊಮೆಟೊಗೆ ಭಾರಿ ಬೆಲೆ ಇರುವಾಗಲೇ ಪಾರ್ವತಮ್ಮನ ಕುಟುಂಬ ದೈನೇಸಿ ಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ಪೊಲೀಸರಿಗೆ ದೂರು ನೀಡಿರುವುದಾಗಿ ಪಾರ್ವತಮ್ಮ ಹೇಳುತ್ತಾರೆ, ಅದರೆ ಅವರು ಕಷ್ಟಪಟ್ಟು ಬೆಳೆದ ಫಸಲು, ಶ್ರಮ ವಾಪಸ್ಸು ಸಿಕ್ಕೀತೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ