ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡುವ ಆಸೆಯಂತೆ ಹಿರಿಯ ನಟ ಬಿರಾದರಗೆ
Biradar: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಬಿರಾದರ್ಗೆ ಆಕ್ಷನ್ ಸಿನಿಮಾದಲ್ಲಿ ನಟಿಸುವಾಸೆ ಇದೆಯಂತೆ.
ಕನ್ನಡದಲ್ಲಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ವೈಜನಾಥ್ ಬಿರಾದರ (Vaijanath Biradar) ಅವರ 90 ಬಿಡಿ ಮನೇಗ್ ನಡಿ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸೀಮಿತ ವರ್ಗದ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಈ ವಯಸ್ಸಿನಲ್ಲಿಯೂ ನಟನೆಯ ಹುರುಪುಳ್ಳ ಬಿರಾದರ ಪ್ರಸ್ತುತ ಯೋಗರಾಜ್ ಭಟ್ಟರ ಕರಟಕ ಧಮನಕ, ಟಗರು ಪಲ್ಯ, ಎಲ್ಲೋ ಜೋಗಪ್ಪ ನಿನ್ನರಮನೆ, ಸಾಧುಕೋಕಿಲ (sadhu kokila) ಮಗ ನಿರ್ದೇಶನದ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂದೆ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos