AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Session; ಬಿಜೆಪಿ ಶಾಸಕರು ಮತ್ತು ಸಂಸದರು ಪೆಟ್ರೋಲ್ ಬೆಲೆ ಇಳಿಸಿ ಅಂತ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರತಿಭಟನೆ ಮಾಡಲಿ: ಡಿಕೆ ಶಿವಕುಮಾರ್

Budget Session; ಬಿಜೆಪಿ ಶಾಸಕರು ಮತ್ತು ಸಂಸದರು ಪೆಟ್ರೋಲ್ ಬೆಲೆ ಇಳಿಸಿ ಅಂತ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರತಿಭಟನೆ ಮಾಡಲಿ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 05, 2023 | 5:02 PM

Share

ಯಡಿಯೂರಪ್ಪ ಇಲ್ಲಿ ಪ್ರತಿಭಟನೆ ನಡೆಸಿದರೆ ಪ್ರಯೋಜನವಿಲ್ಲ ದೆಹಲಿಯಲ್ಲಿ ನಡೆಸಲಿ ಅಂತ ಶಿವಕುಮಾರ್ ಹೇಳಿದರು.

ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಮೂರನೇ ದಿನವೂ ಗಲಾಟೆ ಗದ್ದಲ. ಗ್ಯಾರಂಟಿಗಳ ಬಗ್ಗೆಯೇ ವಿರೋಧ ಪಕ್ಷದ ಸದಸ್ಯರ ವಾಗ್ವಾದಗಳು. ಬಿಜೆಪಿ ಸದಸ್ಯರ ಟೀಕೆಗಳಿಗೆ ಉತ್ತರಿಸಲು ಎದ್ದು ನಿಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಬಿಜೆಪಿ ಸದಸ್ಯರು ಮತ್ತು ನಾಯಕರು ಮಾಡುತ್ತಿರುವ ಪ್ರತಿಭಟನೆ ಪಶ್ಚಾತ್ತಾಪದ ಪ್ರತಿಭಟನೆ (Protest of Repentance), ರಾಜ್ಯದ ಬಡವರಿಗೆ, ಶ್ರಮಿಕರಿಗೆ ತಮ್ಮಿಂದ ಕೊಡಲಾಗದ್ದನ್ನು ಕಾಂಗ್ರೆಸ್ ಸರ್ಕಾರ ಕೊಡುವಂತಾಯ್ತಲ್ಲ ಅಂತ ಪಶ್ಚಾತ್ತಾಪ ಪಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ ಅಂತ ಹೇಳಿದಾಗ ಬಿಜೆಪಿ ಸದಸ್ಯರು, ಮುಖ್ಯಮಂತ್ರಿಯಾಗಲಿಲ್ಲವಲ್ಲಾ ಅಂತ ನೀವು ಪಶ್ಚಾತ್ತಾಪ ಪಡುತ್ತರಿಬಹುದು ಅಂತ ಛೇಡಿಸಿದರು. ಮಾತು ಮುಂದುವರಿಸಿದ ಶಿವಕುಮಾರ್ ಕಚ್ಛಾ ತೈಲದ ಬೆಲೆ ಪಾತಾಳ ಕಂಡಿದ್ದರೂ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಯಾಕೆ ಇಳಿಯುತ್ತಿಲ್ಲ ಅಂತ ಬಿಜೆಪಿ ಶಾಸಕರು, ಸಂಸದರು ದೆಹಲಿಗೆ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಮುಂದೆ ಪ್ರತಿಭಟಿಸಲಿ, ಯಡಿಯೂರಪ್ಪ (BS Yediyurappa) ಇಲ್ಲಿ ಪ್ರತಿಭಟನೆ ನಡೆಸಿದರೆ ಪ್ರಯೋಜನವಿಲ್ಲ ಅಂತ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ