ಪಂದ್ಯದ ವೇಳೆ ಮೈದಾನದಲ್ಲೇ ಮೂತ್ರ ವಿಸರ್ಜಿಸಿದ ಫುಟ್ಬಾಲ್ ಆಟಗಾರ; ರೆಡ್ ಕಾರ್ಡ್ ತೋರಿದ ರೆಫರಿ

|

Updated on: Aug 21, 2024 | 3:45 PM

ಫುಟ್ಬಾಲ್ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಪೆರುವಿನ ಫುಟ್ಬಾಲ್ ಮೈದಾನದಲ್ಲಿ ನಡೆದಿದೆ. ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ , ಮೈದಾನದ ಪಕ್ಕದಲ್ಲಿದ್ದ ಗೋಡೆಯತ್ತ ಮುಖ ಮಾಡಿ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದಾನೆ.

ಫುಟ್ಬಾಲ್ ಪಂದ್ಯದ ವೇಳೆ ಆಟಗಾರನೊಬ್ಬ ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಪೆರುವಿನ ಫುಟ್ಬಾಲ್ ಮೈದಾನದಲ್ಲಿ ನಡೆದಿದೆ. ವಾಸ್ತವವಾಗಿ ಅಟ್ಲೆಟಿಕೊ ಅವಾಝುನ್ ಮತ್ತು ಕ್ಯಾಂಟೊರ್ಸಿಲೊ ಫುಟ್ಬಾಲ್ ಕ್ಲಬ್ ನಡುವೆ ಕೋಪಾ ಪೆರು ಪಂದ್ಯ ನಡೆಯುತ್ತಿತ್ತು. ಈ ವೇಳೆ ಆಟದ 71 ನೇ ನಿಮಿಷದಲ್ಲಿ ಅಟ್ಲೆಟಿಕೊ ತಂಡಕ್ಕೆ ಕಾರ್ನರ್ ಸಿಕ್ಕಿತು. ಇದೇ ಸಮಯದಲ್ಲಿ, ಕ್ಯಾಂಟೊರ್ಸಿಲೊ ತಂಡದ ಗೋಲ್‌ಕೀಪರ್‌ಗೆ ಸಣ್ಣ ಗಾಯವಾಗಿದೆ. ಇದರಿಂದಾಗಿ ಕೊಂಚ ಸಮಯ ಆಟ ರದ್ದಾಗಿದೆ. ಒಂದೆಡೆ ಎಲ್ಲಾ ಆಟಗಾರರು ಗೋಲ್‌ಕೀಪರ್‌ ಇಂಜುರಿ ಬಗ್ಗೆ ಚಿಂತಿತರಾಗಿದ್ದರೆ, ಇತ್ತ ಕಾರ್ನರ್ ಧ್ವಜದ ಬಳಿ ನಿಂತಿದ್ದ ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ , ಇದ್ಯಾವುದು ನನಗೆ ಸಂಬಂಧವಿಲ್ಲದವನಂತೆ ಮೈದಾನದ ಪಕ್ಕದಲ್ಲಿದ್ದ ಗೋಡೆಯತ್ತ ಮುಖ ಮಾಡಿ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದಾನೆ.

ರೆಡ್ ಕಾರ್ಡ್ ತೋರಿದ ರೆಫರಿ

ಅಟ್ಲೆಟಿಕೊ ಆಟಗಾರ ಮೈದಾನದಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಕಂಡ ಕ್ಯಾಂಟೊರ್ಸಿಲೊ ತಂಡದ ಆಟಗಾರರು ಕೂಡಲೇ ಮ್ಯಾಚ್ ರೆಫರಿಗೆ ದೂರು ನೀಡಿದ್ದಾರೆ. ಆಟಗಾರನ ಈ ವರ್ತನೆಯನ್ನು ನೋಡಿದ ಮ್ಯಾಚ್ ರೆಫರಿ ಕೂಡ ಕೋಪಗೊಂಡರು. ತಕ್ಷಣ ಕ್ರಮ ಕೈಗೊಂಡು ರೆಫರಿ ಅಟ್ಲೆಟಿಕೊ ತಂಡದ ಸೆಬಾಸ್ಟಿಯನ್ ಮುನೋಜ್ ಅವರಿಗೆ ರೆಡ್ ಕಾರ್ಡ್ ತೋರಿಸಿದರು. ಹೀಗಾಗಿ ರೆಡ್ ಕಾರ್ಡ್ ಪಡೆದ ಸೆಬಾಸ್ಟಿಯನ್ ಮುನೋಜ್ ತಕ್ಷಣವೇ ಪಂದ್ಯದಿಂದ ಹೊರಬಿದ್ದಿದಲ್ಲದೆ, ಮುಂದಿನ ಪಂದ್ಯದಿಂದಲೂ ನಿಷೇಧಕ್ಕೊಳಗಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Wed, 21 August 24

Follow us on