ದಾಖಲೆ ತಿದ್ದುವ ದೈನೇಸಿ ಸ್ಥಿತಿ ಸರ್ಕಾರಕ್ಕೆ ಬಂದಿಲ್ಲ, ಅಂಥ ನೀಚ ಕೆಲಸ ಮಾಡಲ್ಲ: ಭೈರತಿ ಸುರೇಶ್, ಸಚಿವ
ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಪರ್ಯಾಯ ಬಡಾವಣೆಯಲ್ಲಿ ತನಗೆ ಸೈಟುಗಳನ್ನು ನೀಡಬೇಕೆಂದು ಪಾರ್ವತಿ ಸಿದ್ದರಾಮಯ್ಯ ಅವರು ತಮ್ಮ ಅರ್ಜಿಯಲ್ಲಿ ಬರೆದಿದ್ದಾರೆಯೇ ಹೊರತು ಪ್ರಾಧಿಕಾರ ಅವರಿಗೆ ನೀಡಿದ ವಿಜಯನಗರ ಬಡಾವಣೆಯಲ್ಲೇ ನಿವೇಶನ ಕೊಡಿ ಅಂತ ಬರೆದಿಲ್ಲ ಎಂದು ಸಚಿವ ಭೈರತಿ ಸುರೇಶ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮುಡಾ ಹಗರಣದಲ್ಲಿ ದಾಖಲಾತಿಗಳನ್ನು ವ್ಹೈಟ್ನರ್ ಬಳಸಿ ತಿದ್ದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾಗಿರುವಂಥವು, ಅಂಥ ದೈನೇಸಿ ಸ್ಥಿತಿ ಸರ್ಕಾರಕ್ಕೆ ಬಂದಿಲ್ಲ, ಅಂಥ ನೀಚ ಕೆಲಸವನ್ನು ಸರ್ಕಾರದ ಭಾಗವಾಗಿರುವ ಯಾರೊಬ್ಬರೂ ಮಾಡಲ್ಲ ಎಂದು ಹೇಳಿದರು. ಮುಡಾ ಪ್ರಕರಣವೀಗ ನ್ಯಾಯಾಲಯದಲ್ಲಿರುವುದರಿಂದ ಅದರ ಬಗ್ಗೆ ಮಾತಾಡುವುದು ಸೂಕ್ತವಲ್ಲ ಎಂದು ಹೇಳಿದ ಸಚಿವ ಸುರೇಶ್, ಮಾಧ್ಯಮದವರು ಕೇಳುತ್ತಿರುವುದರಿಂದ ಹೇಳುವ ಪ್ರಸಂಗ ಬಂದಿದೆ ಎಂದರು. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ತಾವು ಅರ್ಜಿಯಲ್ಲಿ ಬರೆಯುವಾಗ ಏನೋ ತಪ್ಪು ಬರೆದಿದ್ದಾರೆ, ವ್ಹೈಟ್ನರ್ ಬಳಸಿ ಬರೆದ ತಪ್ಪನ್ನು ಸರಿಪಡಿಸಿದ್ದಾರೆ, ಅದರಲ್ಲಿ ತಪ್ಪು ಎಲ್ಲಿಂದ ಬಂತು ಎಂದು ಸುರೇಶ್ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ