ಕುಮಾರಸ್ವಾಮಿಯನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಕಿಲ್ಲ ಒಬ್ಬ ಕಾನ್ಸ್ಟೇಬಲ್ ಸಾಕು: ಸಿದ್ದರಾಮಯ್ಯ
ಮೈನಿಂಗ್ ಲೀಸ್ ಅಕ್ರಮದಲ್ಲಿ ಲೋಕಾಯುಕ್ತ ಎಸ್ಐಟಿ ಸಲ್ಲಿಸಿದ್ದ ಚಾರ್ಜ್ಶೀಟ್ ಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸರ್ಕಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಕುಮಾರಸ್ವಾಮಿಯವರಲ್ಲಿ ಭಯ ಮೂಡಿಸಿದೆ, ಹಾಗಾಗೇ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಅಲಮಟ್ಟಿಯಲ್ಲಿ ಹೇಳಿದರು.
ವಿಜಯಪುರ: ಈ ಸೀಕ್ವೆನ್ಸ್ ಅನ್ನು ಕೊಂಚ ಗಮನಿಸಿ. ಕೇಂದ್ರ ಸಚಿವ ಕುಮಾರಸ್ವಾಮಿಯನ್ನು ಬಂಧಿಸಬೇಕೆಂದು ನಾನು ಯಾವತ್ತೂ ಹೇಳಿಲ್ಲ, ಅದರೆ ಅಂಥ ಪ್ರಸಂಗ ಬಂದರೆ ಮುಲಾಜಿಲ್ಲದೆ ಅರೆಸ್ಟ್ ಮಾಡಲಾಗುವುದು: ಸಿದ್ದರಾಮಯ್ಯ
ಒಬ್ಬ ಸಿದ್ದರಾಮಯ್ಯ ಅಲ್ಲ ನೂರು ಸಿದ್ದರಾಮಯ್ಯ ಜೊತೆಗೂಡಿದರೂ ನನ್ನ ಬಂಧಿಸಲಾಗಲ್ಲ: ಕುಮಾರಸ್ವಾಮಿ
ಕುಮಾರಸ್ವಾಮಿಯನ್ನು ಅರೆಸ್ಟ್ ಮಾಡೋದು ನಾನಲ್ಲ ಸ್ವಾಮೀ ಪೋಲಿಸರು, ಅವರನ್ನು ಬಂಧಿಸಲು 100 ಸಿದ್ದರಾಮಯ್ಯ ಬೇಕಿಲ್ಲ ಕಾನ್ಸ್ಟೇಬಲ್ ಸಾಕು: ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳ ಸರಣಿ ಇದು. ಅವರು ಅರೆಸ್ಟ್ ಮಾಡಿಸಲ್ಲ ಇವರು ಅರೆಸ್ಟ್ ಅಗಲ್ಲ ಆ ವಿಷಯ ಬೇರೆ. ಆದರೆ ಅವರ ನಡುವಿನ ವಾಕ್ ಸರಣಿ ಕನ್ನಡಿಗರಿಗೆ ಮನರಂಜನೆ ಒದಗಿಸುತ್ತಿರುವುದು ಸುಳ್ಳಲ್ಲ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆಯಿರುವ ರಾಜಕೀಯ ವೈಷಮ್ಯಕ್ಕೆ ಒಂದೂವರೆ ದಶಕಗಳ ಇತಿಹಾಸವಿದೆ.
ಮುಡಾ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಹಿಂದೆ ಕುಮಾರಸ್ವಾಮಿಯ ಕುತಂತ್ರವಿದೆ ಎಂದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಭಾವಿಸುತ್ತಾರೆ. ಹಾಗಾಗೇ, ಕುಮಾರಸ್ವಾಮಿಯವರ ವಿರುದ್ಧ ದಾಖಲಾಗಿದ್ದ ಮೈನಿಂಗ್ ಹಗರಣವನ್ನು ಸಿದ್ದರಾಮಯ್ಯ ಸರ್ಕಾರ ರೀಓಪನ್ ಮಾಡಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿಬಂತು ಮತ್ತೊಂದು ಗಂಭೀರ ಆರೋಪ