ಮುಡಾ ಪ್ರಕರಣ ಬೆಳಕಿಗೆ ಬಂದ ನಂತರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಹೆಚ್ಚಿದ ಕಾಮರಾಡರೀ!
ಆಲಮಟ್ಟಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜೊತೆ, ಸಚಿವರಾದ ಎಂಬಿ ಪಾಟೀಲ್, ಆರ್ ಬಿ ತಿಮ್ಮಾಪುರ, ಶಿವಾನಂದ ಪಾಟೀಲ್ ಮತ್ತು ವಿಜಯಪುರ ಮತ್ತು ಬಾಗಲಕೋಟೆ ಭಾಗದ ಶಾಸಕರು ಮತ್ತು ಎಂಎಲ್ಸಿಗಳು ಹಾಜರಿದ್ದರು.
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಬಳಿಯಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದರು. ಯಾರೇನೇ ಹೇಳಲಿ ಮುಡಾ ಪ್ರಕರಣ ಬೆಳಕಿಗೆ ಬಂದ ಬೆಳಕಿಗೆ ಬಂದ ಬಳಿಕ ಅದರಲ್ಲೂ ವಿಶೇಷವಾಗಿ ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟೀಸ್ ಜಾರಿಮಾಡಿದ ಬಳಿಕ ಸಿಎಂ ಮತ್ತು ಅವರ ಡೆಪ್ಯುಟಿ ಶಿವಕುಮಾರ್ ನಡುವಿನ ಸ್ನೇಹ, ಹೊಂದಾಣಿಕೆ, ಕಾಮರಾಡರೀ ಮತ್ತಷ್ಟು ಹೆಚ್ಚಿದೆ. ಮುಡಾ ಹಗರಣದಲ್ಲಿ ಶಿವಕುಮಾರ್ ಮುಖ್ಯಮಂತ್ರಿಯವರ ಹಿಂದೆ ನಿಜಕ್ಕೂ ಬಂಡೆಯ ಹಾಗೆ ನಿಂತಿದ್ದಾರೆ. ಸ್ವಲ್ಪಹೊತ್ತಿಗೆ ಮುಂಚೆ ಕೊಪ್ಪಳದಲ್ಲಿ ಸಿದ್ದರಾಮಯ್ಯನವರಿಗೆ ಮಾಧ್ಯಮದವರು ಪ್ರಶ್ನೆಯೊಂದನ್ನು ಕೇಳಿದಾಗ, ಶಿವಕುಮಾರ್ ತಾವೇ ಮುಂದಾಗಿ ಉತ್ತರ ನೀಡಿದರು. ಇಲ್ಲಿ ಆಲಮಟ್ಟಿ ಸುದ್ದಿಗೋಷ್ಠಿಯಲ್ಲಿ ಎಲ್ಲರೂ ಕುರ್ಚಿಗಳಲ್ಲಿ ಆಸೀನರಾದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಧ್ಯಮದವರಿಗೆ ಸ್ನೇಹಿತರೇ ಮೊದಲಿಗೆ ನೀರಾವರಿ ಸಚಿವ ಶಿವಕುಮಾರ್ ಅವರು ಮಾತಾಡುತ್ತಾರೆ ಅಮೇಲೆ ನಾನು ಮಾತಅಡುತ್ತೇನೆ ಎಂದು ಹೇಳುತ್ತ ಮೈಕ್ ಇಸಿದುಕೊಂಡು ಅವರ ಕೈಗೆ ನೀಡುತ್ತಾರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ಅರೆಸ್ಟ್ಗೆ ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ಸ್‌ಟೇಬಲ್ ಸಾಕು: ಸಿಎಂ ತಿರುಗೇಟು