Siddaramaiah in Mysuru: ಅಭಿಮಾನಿಯ ಕಾರಲ್ಲಿ ವಿರೋಧ ಪಕ್ಷದ ನಾಯಕರ ಮೈಸೂರು ನಗರ ಪ್ರದಕ್ಷಿಣೆ

ಅರುಣ್​ ಕುಮಾರ್​ ಬೆಳ್ಳಿ

Updated on: Jan 21, 2023 | 1:25 PM

ಹೊಸ ಕಾರೊಂದನ್ನು ಖರೀದಿಸಿರುವ ಅಭಿಮಾನಿಗೆ ಅದರಲ್ಲಿ ಸಿದ್ದರಾಮಯ್ಯ ಕುಳಿತು ಪ್ರಯಾಣಿಸಬೇಕೆಂಬ ಉತ್ಕಟ ಆಸೆಯಿತ್ತಂತೆ. ಆದರೆ ಅವರು ಕಾರು ಹತ್ತುವ ಮೊದಲು ವಾಹನದ ಸಂಪೂರ್ಣ ತಪಾಸಣೆ ನಡೆಸಲಾಯಿತು.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ಕಳೆದೆರಡು ದಿನಗಳಿಂದ ಮೈಸೂರಲ್ಲೇ ಕಾಣಿಸುತ್ತಿದ್ದಾರೆ. ಶುಕ್ರವಾರ ಅವರು ಅಗಲಿದ ತಮ್ಮ ಆಪ್ತ ಸ್ನೇಹಿತ ಪ ಮಲ್ಲೇಶ್ (Pa Mallesh) ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂದು ಅಂದರೆ ಶನಿವಾರ ಅಭಿಮಾನಿಯೊಬ್ಬರ ಕಾರಲ್ಲಿ ನಗರದ ಸುತ್ತು ಹಾಕಿದರು. ಹೊಸ ಕಾರೊಂದನ್ನು ಖರೀದಿಸಿರುವ ಅಭಿಮಾನಿಗೆ ಅದರಲ್ಲಿ ಸಿದ್ದರಾಮಯ್ಯ ಕುಳಿತು ಪ್ರಯಾಣಿಸಬೇಕೆಂಬ ಉತ್ಕಟ ಆಸೆಯಿತ್ತಂತೆ. ಆದರೆ ಅವರು ಕಾರು ಹತ್ತುವ ಮೊದಲು ವಾಹನದ ಸಂಪೂರ್ಣ ತಪಾಸಣೆ ನಡೆಸಲಾಯಿತು. ಎಲ್ಲ ಓಕೆ ಅಂತಾದ ಬಳಿಕವೇ ಮಾಜಿ ಮುಖ್ಯಮಂತ್ರಿಗಳು ಕಾರಲ್ಲಿ ಕುಳಿತರೆ ಅಲ್ಲು ಅರ್ಜುನ್ (Allu Arjun) ಥರ ಕಾಣುವ ಅಭಿಮಾನಿಯ ಕುಟುಂಬ ಸದಸ್ಯರು ಹಿಂಭಾಗದಲ್ಲಿ ಕುಳಿತರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.