ಗಣೇಶೋತ್ಸವ ಸಂಗೀತ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಭರ್ಜರಿ​ ಡ್ಯಾನ್ಸ್: ವಿಡಿಯೋ ನೋಡಿ

Updated By: Ganapathi Sharma

Updated on: Aug 29, 2025 | 1:04 PM

ಎಂಟಿಬಿ ನಾಗರಾಜ್ ಡ್ಯಾನ್ಸ್ ವಿಡಿಯೋ: ಒಂದೆಡೆ ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ ಹಾಡು ದೊಡ್ಡದಾಗಿ ಮೊಳಗುತ್ತಿದ್ದರೆ ಮತ್ತೊಂದೆಡೆ, ಎಂಎಲ್​ಸಿ ಎಂಟಿಬಿ ನಾಗರಾಜ್ ಕುಣಿದು ಕುಪ್ಪಳಿಸಿದ್ದಾರೆ. ಈ ದೃಶ್ಯ ಕಂಡುಬಂದಿದ್ದ,ಗರುಡಾಚಾರ್ ಪಾಳ್ಯದ ಗಣೇಶೋತ್ಸವದ ಸಂಗೀತ ಕಾರ್ಯಕ್ರಮದಲ್ಲಿ. ಇಳಿ ವಯಸ್ಸಿನಲ್ಲೂ ಮಾಜಿ ಸಚಿವರ ಭರ್ಜರಿ ನೃತ್ಯದ ವಿಡಿಯೋ ಇಲ್ಲಿದೆ.

ದೇವನಹಳ್ಳಿ, ಆಗಸ್ಟ್ 29: ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಗರುಡಾಚಾರ್ ಪಾಳ್ಯದ ಗಣೇಶೋತ್ಸವದ ಸಂಗೀತ ಕಾರ್ಯಕ್ರಮದಲ್ಲಿ ಟಪ್ಪಾಗುಂಚ್ಚಿ ಸ್ಟೆಪ್ ಹಾಕಿ ಭರ್ಜರಿ ಡ್ಯಾನ್ಸ್ ಮಾಡಿದರು. ಇಳಿ ವಯಸ್ಸಿನಲ್ಲೂ ಹುರುಪಿನಿಂದ ಕುಣಿದ ಎಂಟಿಬಿ ನಾಗರಾಜ್ ವಿಡಿಯೋ ಈಗ ವೈರಲ್ ಆಗುತ್ತಿದೆ.