‘ಐಶ್ವರ್ಯಾ ರೈ, ರಚಿತಾ ರಾಮ್, ರಶ್ಮಿಕಾ ಇಲ್ವೇನ್ರಿ, ತಮನ್ನಾನೇ ಬೇಕ?’
Tamannaah Bhatia: ನಟಿ ತಮನ್ನಾ ಭಾಟಿಯಾರನ್ನು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಮಾಜಿ ಸಚಿವ, ಹಿರಿಯ ರಾಜಕಾರಣಿ ಎಚ್ ವಿಶ್ವನಾಥ್ ಅವರು ತಮನ್ನಾ ಅವರನ್ನು ರಾಯಭಾರಿ ಮಾಡಿರುವುದನ್ನು ತಮ್ಮದೇ ಶೈಲಿಯಲ್ಲಿ ಟೀಕೆ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...
ಮೈಸೂರು ಸ್ಯಾಂಡಲ್ ಸೋಪು ಜಾಹೀರಾತಿಗೆ ತಮನ್ನಾ ಭಾಟಿಯಾ (Tamannah Bhatia) ರಾಯಭಾರಿ ಅನ್ನಾಗಿ ಆಯ್ಕೆ ಮಾಡಿರುವುದನ್ನು ತಮ್ಮದೇ ಶೈಲಿಯಲ್ಲಿ ಟೀಕಿಸಿದ ಮಾಜಿ ಸಚಿವ ವಿಶ್ವನಾಥ್, ‘ಏನ್ರಿ ಆ ಯಮ್ಮನಿಗೆ 6.50 ಕೋಟಿ ಅಂತೆ. ಮಿಲ್ಕಿ ಬ್ಯೂಟಿಯಂತೆ ಆಕೆಯದ್ದು. ಅಲ್ರಿ, ಐಶ್ವರ್ಯಾ ರೈ, ರಚಿತಾ ರಾಮ್, ರಶ್ಮಿಕಾ ಮಂದಣ್ಣ ನಮ್ಮವರೇ ಇಲ್ವೇನ್ರಿ? ಪಾಪ ಜನ ಕಷ್ಟಪಟ್ಟು ಕಟ್ಟಿರೋ ಕಂದಾಯದ ದುಡ್ಡನ್ನ, ಈ ಸಿದ್ರಾಮಯ್ಯ ಹೀಗೆ ಯಾರೋ ಹೆಂಗಸ್ರಿಗೆ ಕೊಟ್ಟುಬಿಟ್ಟರೆ ಸುಮ್ಮನೆ ಇರ್ತಾರೇನ್ರಿ ಜನ. ಈ ತಮನ್ನಾ ಐಟಂ ಹಾಡಿಗೆಲ್ಲ ಕುಣಿತಾಳಂತೆ, ಅಲ್ಲು ಕೋಟ್ಯಂತರ ರೂಪಾಯಿ ದುಡ್ಡು ಎಲ್ಲ ಕೊಡ್ತಾರಂತೆ. ಒಟ್ನಲ್ಲಿ ಸಿದ್ರಾಮಯ್ಯ ರಾಜ್ಯಾನ ದಿವಾಳಿ ಮಾಡಿಬಿಡ್ತಾರೆ ರೀ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 26, 2025 04:46 PM
