AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಕೋವಿಡ್ ಪ್ರಕರಣಗಳಿವೆ, ಸೋಂಕು ಗಂಭೀರ ಪ್ರಮಾಣದಲ್ಲಿಲ್ಲ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಕೋವಿಡ್ ಪ್ರಕರಣಗಳಿವೆ, ಸೋಂಕು ಗಂಭೀರ ಪ್ರಮಾಣದಲ್ಲಿಲ್ಲ: ದಿನೇಶ್ ಗುಂಡೂರಾವ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 26, 2025 | 3:41 PM

Share

ಮಳೆಗಾಲಕ್ಕೂ ಮತ್ತು ಕೊರೋನಾ ಸೋಂಕಿಗೂ ಸಂಬಂಧವಿಲ್ಲ ಎಂದು ದಿನೇಶ್ ಗುಂಡೂರಾವ್ ಮಳೆಗಾಲದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತವೆ ಎಂದು ಹೇಳಿದರು. ಆರ್​ಟಿಪಿಸಿಆರ್ ಟೆಸ್ಟ್ ಕಿಟ್ ಗಳನ್ನು ಎಲ್ಲ ಜಿಲ್ಲಾಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜುಗಳಿಗೆ ಕಳಿಸುವ ವ್ಯವಸ್ಥೆ ಶೀಘ್ರದಲ್ಲೇ ಮಾಡಲಾಗುತ್ತದೆ, ಸಾಮೂಹಿಕ ಟೆಸ್ಟ್​ಗಳ ಅವಶ್ಯಕತೆ ಇನ್ನೂ ತಲೆದೋರಿಲ್ಲ ಎಂದು ದಿನೇಶ್ ಹೇಳಿದರು.

ಬೆಂಗಳೂರು, ಮೇ 26: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ರಾಜ್ಯದಲ್ಲಿ ಕೊರೋನಾ ಸೋಂಕಿನ ಬಗ್ಗೆ ಅಪ್ಡೇಟ್​​ಗಳನ್ನು ನೀಡಿದರು. ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಸೋಂಕಿತರಿದ್ದಾರೆ, ಆದರೆ ಯಾರೂ ಆಕ್ಸಿಜನ್ ಮೇಲಾಗಲೀ, ವೆಂಟಿಲೇಟರ್ ಮೇಲಾಗಲಿ ಇಲ್ಲ, ಗಂಭೀರ ಸ್ವರೂಪದ ಸೋಂಕಿನಿಂದ ಯಾರೂ ಬಳಲುತ್ತಿಲ್ಲ ಅನ್ನೋದು ಗೊತ್ತಾಗಿದೆ ಮತ್ತ್ತು ಸೋಂಕಿತರನ್ನು ಅವರವರ ಮನೆಯಲ್ಲಿ ಐಸೋಲೇಷನ್​​ನಲ್ಲಿ ಇಡಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾಯಂಕಾಲ ತಜ್ಞರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆದಿದ್ದಾರೆ, ಎಲ್ಲರೂ ಕುಳಿತು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸಚಿವ ಹೇಳಿದರು.

ಇದನ್ನೂ ಓದಿ:  ಕೊರೋನಾ ತರ ಮತ್ತೊಂದು ರೋಗದ ಭೀತಿ: ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ