ಮುನಿರತ್ನ ವಿರುದ್ಧ ಕ್ರಮ ಜರುಗಿಸದ ಅಶೋಕ ಮತ್ತು ವಿಜಯೇಂದ್ರ ಅಸಮರ್ಥ ನಾಯಕರು: ಡಿಕೆ ಸುರೇಶ್
ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬರು ಮುನಿರತ್ನ ತನ್ನ ಮೂತ್ರ ವಿಸರ್ಜನೆ ಮಾಡಿದರು ಎಂದು ದೂರು ಸಲ್ಲಿಸಿದ್ದಾರೆ ಎಂದ ಸುರೇಶ್, ಯಾಕೋ ಇತ್ತೀಚಿಗೆ ಅಶೋಕ್ ಒಂಥರಾ ಆಗಿದ್ದಾರೆ ಎಂದು ಮುಗಳ್ನಗುತ್ತಾ ಹೇಳಿದರು. ಅವರ ಆರೋಗ್ಯ ಸರಿಯಿಲ್ಲ ಹಾಗಾಗೇ ನಿಶ್ಶಕ್ತರಾಗಿದ್ದಾರೆ ಎಂದು ಬಿಜೆಪಿ ನಾಯಕರೇ ತನಗೆ ಹೇಳಿರೋದು ಎಂದು ಮಾಜಿ ಸಂಸದ ಹೇಳಿದರು.
ಬೆಂಗಳೂರು, ಮೇ 26: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಅರ್ ಅಶೋಕ (Leader of Opposition) ಅವರು ಅಸಮರ್ಥ ನಾಯಕರು ಅಂತ ಮತ್ತೊಮ್ಮೆ ಸಾಬೀತಾಗಿದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದರು. ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಅರ್ ದಾಖಲಾಗಿ ಅವರು ಎಂಥ ರತ್ನ ಎಂದು ಇಡೀ ರಾಜ್ಯಕ್ಕೆ ಗೊತ್ತಾದರೂ ಅಶೋಕ ಮತ್ತು ವಿಜಯೇಂದ್ರ ಯಾವುದೇ ಕ್ರಮ ಜರುಗಿಸಿಲ್ಲ, ಮುನಿರತ್ನ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದಾಗ್ಯೂ ಇವರಿಬ್ಬರು ಸುಮ್ಮನಿದ್ದಾರೆಂದರೆ ಎಷ್ಟು ಅಸಮರ್ಥ ನಾಯಕರು ಅನ್ನೋದು ಗೊತ್ತಾಗುತ್ತದೆ ಎಂದು ಸುರೇಶ್ ಹೇಳಿದರು. ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಸಾಬೀತಾಗಿ, ಎಫ್ಎಸ್ಎಲ್ ರಿಪೋರ್ಟ್ ಅದನ್ನು ದೃಢೀಕರಿಸಿ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದರೂ ಮುನಿರತ್ನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: ಬಮೂಲ್ ಅಧ್ಯಕ್ಷನಾಗಲು ಚುನಾವಣೆ ಎದುರಿಸಬೇಕು ಮತ್ತು ಪಕ್ಷದ ನಾಯಕರ ಸಮ್ಮತಿ ಬೇಕು: ಡಿಕೆ ಸುರೇಶ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್

‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು

ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
