ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳ ತಂದುಕೊಡಿ..ಪೊಲೀಸರ ಎಡವಟ್ಟಿಗೆ ತಂದೆ ಕಣ್ಣೀರು
ಮಂಡ್ಯದ ಸ್ವರ್ಣಸಂದ್ರ ಬಳಿ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಹೆಲ್ಮೆಟ್ ತಪಾಸಣೆಯಲ್ಲಿದ್ದ ಪೊಲೀಸರು ಅಡ್ಡಗಟ್ಟಿದಾಗ, ಬೈಕ್ ಸ್ಕಿಡ್ ಆಗಿ ಬಿದ್ದು ಮೂರೂವರೆ ವರ್ಷದ ಮಗು ಹೃತೀಕ್ಷ ಮೃತಪಟ್ಟಿದೆ. ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರು ಮಡಿಲಲ್ಲಿ ಕಂದಮ್ಮನ ಇಟ್ಟುಕೊಂಡು ಕಣ್ಣೀರಿಟ್ಟರ. ಈ ಹೃದಯ ವಿದ್ರಾವಕ ದೃಶ್ಯವನ್ನು ಕಂಡು ನೆರೆದಿದ್ದವರು ಮಮ್ಮಲ ಮರುಗಿದ್ದಾರೆ.
ಮಂಡ್ಯ, (ಮೇ 26): ಮಂಡ್ಯದ ಸ್ವರ್ಣಸಂದ್ರ ಬಳಿ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಹೆಲ್ಮೆಟ್ ತಪಾಸಣೆಯಲ್ಲಿದ್ದ ಪೊಲೀಸರು ಅಡ್ಡಗಟ್ಟಿದಾಗ, ಬೈಕ್ ಸ್ಕಿಡ್ ಆಗಿ ಬಿದ್ದು ಮೂರೂವರೆ ವರ್ಷದ ಮಗು ಹೃತೀಕ್ಷ ಮೃತಪಟ್ಟಿದೆ. ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರು ಮಡಿಲಲ್ಲಿ ಕಂದಮ್ಮನ ಇಟ್ಟುಕೊಂಡು ಕಣ್ಣೀರಿಟ್ಟರ. ಈ ಹೃದಯ ವಿದ್ರಾವಕ ದೃಶ್ಯವನ್ನು ಕಂಡು ನೆರೆದಿದ್ದವರು ಮಮ್ಮಲ ಮರುಗಿದ್ದಾರೆ.
ಮಗು ಕಳೆದುಕೊಂಡ ನೋವಿನಲ್ಲಿ ಮಾತನಾಡಿರುವ ತಂದೆ, ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಗಾಡಿಯನ್ನು ಅಡ್ಡ ಹಾಕಿದ್ದಾರೆ. ಆಗ ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಸ್ಕಿಡ್ ಆಗಿ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹರಿದಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ ನನ್ನ ಮಗಳ ತಂದು ಕೊಡ್ತೀರಾ? ಎಂದು ಕಣ್ಣೀರಿಟ್ಟರು.

