ಮಾಲೂರು ಮಾಜಿ ಶಾಸಕ ಮಂಜುನಾಥ ಗೌಡ ದೂಂಡಾವರ್ತನೆ, ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ಮುಖಂಡನ ಮೇಲೆ ಹಲ್ಲೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 05, 2022 | 11:06 AM

ಸಂಸದ ಮುನಿಸ್ವಾಮಿಯವರೂ ಸ್ಥಳದಲ್ಲೇ ಇದ್ದು ಮಾಜಿ ಶಾಸಕ ಮತ್ತು ಅವರ ಸಂಗಡಿಗರ ಗೂಂಡಾವರ್ತನೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪುಂಡರು ಅವರ ಮಾತಿಗೂ ಬೆಲೆ ಕೊಟ್ಟಿಲ್ಲ.

ಕೋಲಾರ: ಇಂಥ ಮುಖಂಡರಿದ್ದರೆ ಸಾಕು, ರೌಡಿಗಳು ಸಹ ಗೂಂಡಾಗಿರಿಗೆ ಗುಡ್ ಬೈ ಹೇಳಿ ಮನೆ ಸೇರಿಕೊಂಡು ಬಿಡುತ್ತಾರೆ. ಈ ವಿಡಿಯೋದಲ್ಲಿ ಮಾಲೂರಿನ ಮಾಜಿ ಶಾಸಕ ಮಂಜುನಾಥ ಗೌಡ (Manjunath Gowda) ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಮುಖಂಡರೊಬ್ಬರ (BJP leader) ಮೇಲೆ ಪೋಲಿಸರ ಸಮ್ಮುಖದಲ್ಲೇ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದು. ಈ ಘಟನೆ ಶುಕ್ರವಾರದಂದು ನಡೆದಿದೆ. ಮಾಲೂರು ಕ್ಷೇತ್ರದ ಟೇಕಲ್ (Tekal) ನಲ್ಲಿ ಬಿಜೆಪಿ ಮುಖಂಡ ಕೆಂಪೇಗೌಡ ಪ್ರತಿಮೆ ಹೊತ್ತ ವಾಹನದಲ್ಲಿ ಬರುವಾಗ ಮಂಜುನಾಥ ಹಲ್ಲೆ ನಡೆಸಿದ್ದಾರೆ. ಸಂಸದ ಮುನಿಸ್ವಾಮಿಯವರೂ ಸ್ಥಳದಲ್ಲೇ ಇದ್ದು ಮಾಜಿ ಶಾಸಕ ಮತ್ತು ಅವರ ಸಂಗಡಿಗರ ಗೂಂಡಾವರ್ತನೆಯನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪುಂಡರು ಅವರ ಮಾತಿಗೂ ಬೆಲೆ ಕೊಟ್ಟಿಲ್ಲ.

Loading...
Unable to load recommendations.
Follow Us
TV9 Web

TV9 Kannada

Read More