Loading video

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಸೆಂಬ್ಲಿ ಚುನಾವಣೆ ಸೋತ ಬಳಿಕ ಈಗ ಏನ್ಮಾಡ್ತಿದಾರೆ ನೋಡಿ?

| Updated By: ಸಾಧು ಶ್ರೀನಾಥ್​

Updated on: Sep 25, 2023 | 10:38 AM

ತೋಟದಲ್ಲಿ ವ್ಯವಸಾಯ ನೋಡಿಕೊಂಡು, ಪ್ರಾಣಿ ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಿರುವ ಮಾಜಿ ಸ್ಪೀಕರ್ ನಾಯಿಯೊಂದಿಗೆ ಸಲುಗೆಯಿಂದ ಇರುವ ವಿಡಿಯೋ ಹಾಕಿ ತಮ್ಮ ವಿರೋಧಿಗಳು ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ! ರಮೇಶ್ ಕುಮಾರ್ ಅವರ ಅಭಿಮಾನಿಗಳು ಕಾಂಗ್ರೆಸ್ ಮುಖಂಡರು, ನಾಯಕರ ಕಾಲೆಳೆದಿರುವ ರಮೇಶ್​ ಕುಮಾರ್ ಅಭಿಮಾನಿಗಳು ನಾಯಿಗೆ ಇರೋ ನಿಯತ್ತು ಜನರಿಗೆ ಇಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಮಾಜಿ ಸ್ಪೀಕರ್ ರಮೇಶ್ ಕುಮಾರ್ (former speaker KR Ramesh Kumar)​ ಕಾಂಗ್ರೆಸ್ ಮುಖಂಡರ (Congress) ವಿರುದ್ದ ಬೇಸರಗೊಂಡಿದ್ದಾರೆ ಅನ್ನೋ ವಿಚಾರವೊಂದು ಬಹಿರಂಗ ಗೊಂಡಿದೆ. ಕಳೆದ ನಾಲ್ಕು ತಿಂಗಳಿನಿಂದ ರಾಜಕೀಯ ಕೃಷಿ ಬಿಟ್ಟು, ಒಬ್ಬ ಸಾಮಾನ್ಯ ರೈತನಾಗಿ ವ್ಯವಸಾಯ ಮಾಡುತ್ತಾ ಪ್ರಕೃತಿ ಮಧ್ಯದಲ್ಲಿ ಕಾಲ ಕಳೆಯುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ತೋಟದಲ್ಲಿ ವ್ಯವಸಾಯ ಮಾಡುತ್ತಿರುವ ವಿಡಿಯೋ ಸಖತ್ ವೈರಲ್​ ಆಗಿದೆ.

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದ ರಾಜ್ಯ ನಾಯಕರು ಸೇರಿದಂತೆ ಕ್ಷೇತ್ರದ ಮುಖಂಡರ ವಿರುದ್ದ ಬೇಸರ ಹೊರ ಹಾಕಿ, ಪರೋಕ್ಷವಾಗಿ ನಾಯಕರ ವಿರುದ್ದ ಮುನಿಸಿಕೊಂಡಿರುವ ವಿಚಾರ ಬಹಿರಂಗಗೊಳಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ನಲ್ಲಿರುವ ( Srinivasapur, Kolar) ತಮ್ಮ ತೋಟದಲ್ಲಿ ಕೆಲಸ ಮಾಡಿಕೊಂಡು ರಾಜಕೀಯದಿಂದ ದೂರ ಉಳಿದಿರುವ ರಮೇಶ್ ಕುಮಾರ್ ಕಾಂಗ್ರೆಸ್ ನಾಯಕರ ವಿರುದ್ದವೆ ಮುನಿಸಿಕೊಂಡಿದ್ದಾರೆ.

ಹಾಗಾಗಿ ತೋಟದಲ್ಲಿ ವ್ಯವಸಾಯ ನೋಡಿಕೊಂಡು, ಪ್ರಾಣಿ ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಿರುವ ಮಾಜಿ ಸ್ಪೀಕರ್ ನಾಯಿಯೊಂದಿಗೆ ಸಲುಗೆಯಿಂದ ಇರುವ ವಿಡಿಯೋ ಹಾಕಿ ತಮ್ಮ ವಿರೋಧಿಗಳು ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ! ರಮೇಶ್ ಕುಮಾರ್ ಅವರ ಅಭಿಮಾನಿಗಳು ಕಾಂಗ್ರೆಸ್ ಮುಖಂಡರು, ನಾಯಕರ ಕಾಲೆಳೆದಿರುವ ರಮೇಶ್​ ಕುಮಾರ್ ಅಭಿಮಾನಿಗಳು ನಾಯಿಗೆ ಇರೋ ನಿಯತ್ತು ಜನರಿಗೆ ಇಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಇದು ಯಾರಿಗೆ ಅನ್ನೋ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ