ಎಫ್ ಎಸ್ ಎಲ್ ವರದಿ ಸಲ್ಲಿಕೆಯಾದ ಕೂಡಲೇ ಅದನ್ನು ಸಾರ್ವಜನಿಕಗೊಳಿಸಲಾಗುವುದು: ಸಿದ್ದರಾಮಯ್ಯ

|

Updated on: Mar 01, 2024 | 3:09 PM

ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದೆಡೆ ನಿಷ್ಠೆ ಪ್ರದರ್ಶಿಸುವ ಜನರನ್ನು ತಮ್ಮ ಸರ್ಕಾರ ಸಹಿಸಲ್ಲ ಎಂದ ಮುಖ್ಯಮಂತ್ರಿಯವರು, ದೇಶಭಕ್ತಿಯನ್ನು ಕಾಂಗ್ರೆಸ್ ಬಿಜೆಪಿಯಿಂದ ಕಲಿಯಬೇಕಿಲ್ಲ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕಾಂಗ್ರೆಸ್ ನಾಯಕರ ಹೋರಾಟದಿಂದ, ಬಿಜೆಪಿ ನಾಯಕರ್ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದರು.

ಹಾಸನ: ತಮ್ಮ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆ (guarantee schemes) ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಹಾಸನಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ವಿಧಾನ ಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಎಫ್ ಎಸ್ ಎಲ್ ವರದಿಯನ್ನು ಬಹಿರಂಗಗೊಳಿಸಬೇಕೆಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವರದಿ ಬಂದ ಕೂಡಲೇ ಅದನ್ನು ಸಾರ್ವಜನಿಕಗೊಳಿಸಲಾಗುವುದೆಂದು ಹೇಳಿದರು. ನಮ್ಮ ದೇಶದಲ್ಲಿದ್ದುಕೊಂಡು ಬೇರೆ ದೇಶದೆಡೆ ನಿಷ್ಠೆ ಪ್ರದರ್ಶಿಸುವ ಜನರನ್ನು ತಮ್ಮ ಸರ್ಕಾರ ಸಹಿಸಲ್ಲ ಎಂದ ಮುಖ್ಯಮಂತ್ರಿಯವರು, ದೇಶಭಕ್ತಿಯನ್ನು ಕಾಂಗ್ರೆಸ್ ಬಿಜೆಪಿಯಿಂದ ಕಲಿಯಬೇಕಿಲ್ಲ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಕಾಂಗ್ರೆಸ್ ನಾಯಕರ ಹೋರಾಟದಿಂದ, ಬಿಜೆಪಿ ನಾಯಕರ್ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿದರು. ಈ ವಿಷಯವನನ್ನು ಅವರು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ಆದರೆ ಒಂದು ಪಕ್ಷ ಪಾಕ್ ಪರ ಘೋಷಣೆ ಕೂಗಿದ್ದು ಸಾಬೀತಾದರೆ ಕೂಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Siddaramaiah: ಒತ್ತವರಿ ಮಾಡಿಕೊಂಡ ವೃದ್ಧೆಯ ಜಮೀನು ಬಿಡಿಸಿಕೊಡುವಂತೆ ರಾಮನಗರ ಡಿಸಿಗೆ ಸೂಚಿಸಿದ ಸಿದ್ದರಾಮಯ್ಯ

Follow us on