Nandi Hills: ಸೌಂದರ್ಯ ಸೊಬಗಿನ ನಂದಿ ಬೆಟ್ಟದಲ್ಲಿ ಫುಲ್ ಟ್ರಾಫಿಕ್ ಜಾಮ್, ಪಾರ್ಕಿಂಗ್ ಸಮಸ್ಯೆ

| Updated By: ಆಯೇಷಾ ಬಾನು

Updated on: Aug 13, 2023 | 8:34 AM

ಪ್ರೇಮಿಗಳು ಸ್ವರ್ಗ ತಾಣ ನಂದಿ ಹಿಲ್ಸ್ ಬೆಂಗಳೂರಿಗೆ ಸಮೀಪ ಇರುವ ಕಾರಣ ಬೆಂಗಳೂರಿನಿಂದ ಅನೇಕ ಮಂದಿ ಈ ಪ್ರವಾಸಿ ತಾಣಕ್ಕೆ ವೀಕೆಂಟ್​ಗಳಲ್ಲಿ ಲಗ್ಗೆ ಇಡುತ್ತಾರೆ.

ವಿಕೇಂಡ್ ಹಿನ್ನಲೆ ನಂದಿಗಿರಿಧಾಮಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಗಿರಿಧಾಮದ ಬಳಿ ಕಿಲೋ ಮೀಟರ್​ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಚಿಕ್ಕಬಳ್ಳಾಫುರ ತಾಲೂಕಿನ ನಂದಿಗಿರಿಧಾಮದ ಬಳಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಸ್ಥಳವಿಲ್ಲದೆ ಪ್ರವಾಸಿಗರು ಪರದಾಡುವಂತಾಗಿದೆ. ಪ್ರವಾಸೋದ್ಯಮ ಇಲಾಖೆ ವಿರುದ್ಧ ಪ್ರವಾಸಿಗರು ಪುಲ್ ಗರಂ ಆಗಿದ್ದಾರೆ.

ಪ್ರೇಮಿಗಳು ಸ್ವರ್ಗ ತಾಣ ನಂದಿ ಹಿಲ್ಸ್ ಬೆಂಗಳೂರಿಗೆ ಸಮೀಪ ಇರುವ ಕಾರಣ ಬೆಂಗಳೂರಿನಿಂದ ಅನೇಕ ಮಂದಿ ಈ ಪ್ರವಾಸಿ ತಾಣಕ್ಕೆ ವೀಕೆಂಟ್​ಗಳಲ್ಲಿ ಲಗ್ಗೆ ಇಡುತ್ತಾರೆ. ಪ್ರಕೃತಿ ಪ್ರಿಯರಿಗೆ ಶನಿವಾರ-ಭಾನುವಾರ ಬಂತು ಅಂದ್ರೆ ಸಾಕು ಈ ಗಿರಿಧಾಮ ಯುವಕ-ಯುವತಿಯರಿಂದ ತುಂಬಿ ತುಳುಕುತ್ತಿರುತ್ತದೆ.