ಹಾವೇರಿಯ ಸಿಂಧಗಿ ಮಠದಲ್ಲಿ ಶತರುದ್ರಾಭಿಷೇಕ, ರುದ್ರಹೋಮ ಮಾಡಿಸಿದ ಕೆಎಸ್​ ಈಶ್ವರಪ್ಪ

ಹಾವೇರಿಯ ಸಿಂಧಗಿ ಮಠದಲ್ಲಿ ಶತರುದ್ರಾಭಿಷೇಕ, ರುದ್ರಹೋಮ ಮಾಡಿಸಿದ ಕೆಎಸ್​ ಈಶ್ವರಪ್ಪ

ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು

Updated on: Aug 13, 2023 | 1:10 PM

ಹಾವೇರಿಯ ಸಿಂದಗಿ ಮಠದಲ್ಲಿ ಮಾಜಿ ಸಚಿವ ಈಶ್ವರಪ್ಪ ಶತರುದ್ರಾಭಿಷೇಕ, ರುದ್ರಹೋಮ. ಪುತ್ರ ಕಾಂತೇಶ್​ಗೆ MP ಟಿಕೆಟ್ ನೀಡುವ ವಿಚಾರ. ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂದು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ,ರಾಷ್ಟ್ರ ಸಮಿತಿಯರು ತಿರ್ಮಾನ ಮಾಡ್ತಾರೆ ಎಂದ ಈಶ್ವರಪ್ಪ.

ಹಾವೇರಿ, ಆ.13: ಜಿಲ್ಲೆಯ ಸುಪ್ರಸಿದ್ದ ಸಿಂಧಗಿ ಮಠಕ್ಕೆ ಕೆ.ಎಸ್. ಈಶ್ವರಪ್ಪ ಮತ್ತು ಕುಟುಂಬಸ್ಥರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಹೋಮ ಹಾಗೂ ಪೂಜೆಯಲ್ಲಿ ಈಶ್ವರಪ್ಪ ಕುಟುಂಬ ಪಾಲ್ಗೊಂಡಿದ್ದಾರೆ. ಸಿಂದಗಿ ಮಠದಲ್ಲಿ ಮಾಜಿ ಸಚಿವ ಈಶ್ವರಪ್ಪ ಶತರುದ್ರಾಭಿಷೇಕ, ರುದ್ರಹೋಮ ಮಾಡಿಸಿದರು. ಪುತ್ರ ಕಾಂತೇಶ್​ಗೆ MP ಟಿಕೆಟ್ ನೀಡುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಟಿಕೆಟ್ ಕೊಡಬೇಕು, ಬಿಡಬೇಕು ಎಂದು ಹೈಕಮಾಂಡ್ ನೋಡುತ್ತದೆ. ಟಿಕೆಟ್ ನೀಡುವ ವಿಚಾರದಲ್ಲಿ ರಾಜ್ಯ,ರಾಷ್ಟ್ರ ಸಮಿತಿಯರು ತಿರ್ಮಾನ ಮಾಡ್ತಾರೆ ಎಂದರು.