ರಾಮನಗರ: ಯುವ ಮುಖಂಡನೊಬ್ಬ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಅನ್ನುತ್ತಿದ್ದಂತೆ ಮೈಕ್ ಕಿತ್ತಿಕೊಂಡ ಗೃಹ ಸಚಿವ!

|

Updated on: Jan 05, 2024 | 11:20 AM

ನೆಚ್ಚಿನ ನಾಯಕನ ಕೃಪಾಕಟಾಕ್ಷ ತಮ್ಮ ಮೇಲೆ ಬೀಳಲುಮ ಯುವ ಮುಖಂಡರು, ಪ್ರವರ್ಧಮಾನಕ್ಕೆ ಬರಲು ಹವಣಿಸುತ್ತಿರುವ ಪಕ್ಷದ ಕಾರ್ಯಕರ್ತರು ಇಂಥ ಘೋಷಣೆಗಳನ್ನು ಕೂಗುತ್ತಾರೆ. ಆದರೆ ಅದು ತಮ್ಮ ನಾಯಕನನ್ನು ಹೈಕಮಾಂಡ್ ಮುಂದೆ ಅವಕೃಪೆಗೊಳಗಾಗಿಸುತ್ತದೆ ಎಂಬ ಅಂಶವನ್ನು ಕಡೆಗಣಿಸುತ್ತಾರೆ.

ರಾಮನಗರ: ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಹೈಕಮಾಂಡ್ (high command) ವಿಷಯದಲ್ಲಿ ಭಯವಿದ್ದಂತಿಲ್ಲ. ತಮ್ಮ ತಮ್ಮ ನಾಯಕನಿಗೆ ಹಾರ ತುರಾಯಿಗಳಿಂದ ಸನ್ಮಾನಿಸಿ ಅವರೇ ಮುಂದಿನ ಮುಖ್ಯಮಂತ್ರಿ ಅಂತ ಘಂಟಾಘೋಶವಾಗಿ ಸಾರುವುದು ಒಂದು ಸಾಮಾನ್ಯ ಸಂಗತಿಯೆನಿಸಿಬಿಟ್ಟಿದೆ. ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಅಂಬೇಡ್ಕರ್ ಹಬ್ಬ (Ambedkar Habba) ಆಚರಣೆಯ ವೇಳೆ ಇಂಥದೊಂದು ಸಂದರ್ಭ ಸೃಷ್ಟಿಯಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ ಗೃಹಸಚಿವ ಜಿ ಪರಮೇಶ್ವರ್ (G Parameshwara) ಅವರನ್ನು ಸ್ಥಳೀಯ ಕಾರ್ಯಕರ್ತರು ಮತ್ತು ಡಾ ಬಿ ಅರ್ ಅಂಬೇಡ್ಕರ್ ಸಂಘದ ಪದಾಧಿಕಾರಿ ಮತ್ತು ಸದಸ್ಯರು ಸೇಬಿನ ಹಾರ ಹಾಕಿ ಅದ್ದೂರಿಯಿಂದ ಸ್ವಾಗತಿಸಿದರು. ನಂತರ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಮುಂದಿನ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೆ ಅಂತ ಕೂಗಿ ಅಲ್ಲಿದ್ದವರು ಜೈ ಅನ್ನುತ್ತಿದ್ದಂತೆಯೇ ರಾಜ್ಯದ ಪ್ರಬುದ್ಧ ರಾಜಕಾರಣಿ ಎನಿಸಿಕೊಂಡಿರುವ ಗೃಹ ಸಚಿವರು ಮುಖಂಡನ ಕೈಯಿಂದ ಮುಗುಳ್ನಗುತ್ತಾ ಮೈಕ್ ಕಿತ್ತಿಕೊಂಡರು. ಇಂಥ ಘೋಷಣೆಗಳು ಹೈ ಕಮಾಂಡ್ ಮತ್ತು ಪಕ್ಷದ ರಾಜ್ಯ ನಾಯಕರ ಮುಂದೆ ತನ್ನನ್ನು ಮುಜುಗರಕ್ಕೆ ಸಿಕ್ಕಿಸುತ್ತವೆ ಅನ್ನೋದು ಅನುಭವಿ ರಾಜಕಾರಣಿಗೆ ಚೆನ್ನಾಗಿ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ