ಚಲಿಸುವ ಕಾರು ಹೊತ್ತಿಯುರಿದ ಮತ್ತೊಂದು ಘಟನೆ ತುಮಕೂರಿನಲ್ಲಿ, ಕಾರಲ್ಲಿದ್ದವರು ಅಪಾಯದಿಂದ ಪಾರು
ಬೆಂಕಿಗಾಹುತಿಯಾದ ಕಾರು ಯಾವುದೇ ಮೇಕ್ ಆಗಿರಲಿ ಪ್ರಶ್ನೆ ಅದಲ್ಲ; ಎಲ್ಲ ಕಾರು ತಯಾರಿಕಾ ಕಂಪನಿಗಳ ವಾಹನಗಳು ಈ ಬಗೆಯ ದುರ್ಘಟನೆಗೀಡಾಗುತ್ತಿವೆ. ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಇದುವರೆಗೆ ಯಾವ ಕಂಪನಿಯೂ ಚಲಿಸುವ ಕಾರಿಗಳಲ್ಲಿ ಬೆಂಕಿ ಯಾಕೆ ಹೊತ್ತಿಕೊಳ್ಳುತ್ತದೆ ಅನ್ನೋದಿಕ್ಕೆ ಸಷ್ಟನೆ ನೀಡಿಲ್ಲ ಮತ್ತು ಅಂಥ ಅನಾಹುತ ತಪ್ಪಿಸುವ ತಾಂತ್ರಿಕತೆಯನ್ನು ಅಳವಡಿಸುವ ಪ್ರಯತ್ನವೂ ನಡೆದಿಲ್ಲ.
ತುಮಕೂರು: ಚಲಿಸುವ ಕಾರುಗಳು (moving car) ಇದ್ದಕ್ಕಿದ್ದಂತೆ ಹೊತ್ತಿ ಉರಿಯುವ ಘಟನೆಗಳು ಪದೇಪದೆ ಜರುಗುತ್ತಿವೆ. ದೃಶ್ಯಗಳಲ್ಲಿ ನೀವು ನೋಡುತ್ತಿರುವ ಹಾಗೆ ಕಾರೊಂದು ಬೆಂಕಿಯಲ್ಲಿ ಸುಟ್ಟು ಹೋಗುತ್ತಿದೆ ಮತ್ತು ಜನ ಅದರ ಸುತ್ತ ನೆರೆದು ಅಸಾಹಯಕರಾಗಿ ನೋಡುತ್ತಿದ್ದಾರೆ. ದುರ್ಘಟನೆ ನಡೆದಿರೋದು ಕಳೆದ ರಾತ್ರಿ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹೊಸಪಾಳ್ಯ ಗೇಟ್ (Hosapalya Gate) ಹತ್ತಿರ. ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಅದರಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಬ್ಬಿಯಿಂದ ಅಗ್ನಿಶಾಮಕ ದಳ (fire engine) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಬೆಂಕಿಗಾಹುತಿಯಾದ ಕಾರು ಯಾವುದೇ ಮೇಕ್ ಆಗಿರಲಿ ಪ್ರಶ್ನೆ ಅದಲ್ಲ; ಎಲ್ಲ ಕಾರು ತಯಾರಿಕಾ ಕಂಪನಿಗಳ ವಾಹನಗಳು ಈ ಬಗೆಯ ದುರ್ಘಟನೆಗೀಡಾಗುತ್ತಿವೆ. ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಇದುವರೆಗೆ ಯಾವ ಕಂಪನಿಯೂ ಚಲಿಸುವ ಕಾರಿಗಳಲ್ಲಿ ಬೆಂಕಿ ಯಾಕೆ ಹೊತ್ತಿಕೊಳ್ಳುತ್ತದೆ ಅನ್ನೋದಿಕ್ಕೆ ಸಷ್ಟನೆ ನೀಡಿಲ್ಲ ಮತ್ತು ಅಂಥ ಅನಾಹುತ ತಪ್ಪಿಸುವ ತಾಂತ್ರಿಕತೆಯನ್ನು ಅಳವಡಿಸುವ ಪ್ರಯತ್ನವೂ ನಡೆದಿಲ್ಲ. ಇದು ನಿಜಕ್ಕೂ ಆತಂಕಕಾರಿ ವಿದ್ಯಮಾನ ಮಾರಾಯ್ರೇ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ