ಗದಗ, ಅಕ್ಟೋಬರ್ 03: ಭಾರತೀಯ ಸೈನ್ಯದಲ್ಲಿ 17 ವರ್ಷಗಳ ಕಾಲ ಸುದೀರ್ಘ ದೇಶಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಹಿಮಾನ ಎಂ. ಹೆಬ್ಬಳ್ಳಿ ಅವರಿಗೆ ಗದಗ ತಾಲೂಕಿನ ಹುಟ್ಟೂರು ಹುಯಿಲಗೋಳ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಆಗಮಿಸಿದ ಯೋಧನಿಗೆ ಶಾಲಾ ಮಕ್ಕಳು, ಗ್ರಾಮದ ಹಿರಿಯರು ಹಾಗೂ ಸ್ನೇಹಿತರ ಬಳಗ ಹೂಮಳೆ ಗರೆದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ತೆರೆದ ಜೀಪಿನಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಮಾರ್ಗ ಮಧ್ಯೆ ನಾಡಕವಿ ಹುಯಿಲಗೋಳ ನಾರಾಯಣರಾವ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಯೋಧ ರಹಿಮಾನ, ಗ್ರಾಮದ ಸೂಗೀರೇಶ್ವರ, ದುರ್ಗಾದೇವಿ ಹಾಗೂ ಶ್ರೀ ಮಾರುತಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಯೋಧನ ಆಗಮನದಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:48 am, Sat, 3 October 26