ಗದಗ: ಮಕ್ಕಳ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯರು ಎಂದು ಭಾವಿಸಿ ಧಾರವಾಡ ಮೂಲದ ಏಳು ಮಹಿಳೆಯರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹೇರ್ ಪಿನ್ ಮಾರಾಟ ಮಾಡುತ್ತಿದ್ದ ಇವರು ಅಮಾಯಕರು ಎಂದು ತಿಳಿದುಬಂದಿದೆ. ಸ್ಥಳೀಯರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದು, ಮುಂಡರಗಿ ಠಾಣೆಯಲ್ಲಿ ದೂರು ದಾಖಲಾಗಿದೆ. ವದಂತಿಗಳಿಂದ ಉಂಟಾದ ಹಿಂಸಾಚಾರದ ಭೀಕರ ಘಟನೆ ಇದು.
ಗದಗ, ಡಿ.27: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯರು ಎಂದು ಭಾವಿಸಿ 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಸಾರ್ವಜನಿಕರು ಥಳಿಸಿರು ಘಟನೆ ನಡೆದಿದೆ. ಮಕ್ಕಳ ಕಳ್ಳಿಯರು ಎಂದು ಭಾವಿಸಿ ಬಸ್ ನಿಲ್ದಾಣದಲ್ಲಿ ಈ ಮಹಿಳೆಯರಿಗೆ ಹೊಡೆದಿದ್ದಾರೆ. ಈ ಏಳು ಮಹಿಳೆಯರನ್ನು ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದವರು ಎಂದು ಹೇಳಲಾಗಿದೆ. ಹೇರ್ ಪಿನ್ ಮಾರುತ್ತಿದ್ದ ಅಣ್ಣಿಗೇರಿ ಮೂಲದ ಮಹಿಳೆಯರನ್ನು ಮಕ್ಕಳ ಕಳ್ಳಿಯರು ಎಂದು ಹೇಳಿ ಥಳಿಸಿದ್ದಾರೆ. ಇದೀಗ ಸ್ಥಳೀಯರು ಅಪರಿಚಿತ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ