Video: ಮಗು ಹೊತ್ತುಕೊಂಡು ಬಸ್​ ಬಾಗಿಲಲ್ಲೇ ಕುಳಿತು ಮಹಿಳೆ ಪ್ರಯಾಣ: ಕೆಎಸ್​ಆರ್​ಟಿಸಿ ಸಿಬ್ಬಂದಿ ನಿರ್ಲಕ್ಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2023 | 3:56 PM

Gadag News: ಗದಗ ನಗರದಿಂದ ಜಿಲ್ಲಾಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಅಂದಾಜು ಒಂದು ವರ್ಷದ ಮಗುವನ್ನ ಕಂಕುಳಲ್ಲಿಟ್ಟುಕೊಂಡು ಮಹಿಳೆ ಪ್ರಯಾಣಿಸಿದ್ದಾರೆ. ಬಸ್ ಫುಲ್ ರಷ್ ಇದ್ದ ಹಿನ್ನೆಲೆ ಸೀಟ್ ಸಿಗದೇ ಬಾಗಿಲಲ್ಲೇ ಕುಳಿತುಕೊಂಡಿದ್ದಾರೆ. ಸ್ವಲ್ಪ ಯಾಮಾರಿದರೂ ತಾಯಿ ಹಾಗೂ ಮಗುವಿಗೆ ಅಪಾಯ ತಪ್ಪಿದ್ದಲ್ಲ.

ಗದಗ ಆಗಸ್ಟ್​ 11: ಉಚಿತ ಬಸ್​ ಪ್ರಯಾಣಕ್ಕೆ ಅವಕಾಶ ಮಾಡಿದಾಗಿನಿಂದಲೂ ಪ್ರತಿಯೊಂದು ಬಸ್​ಗಳು ಫುಲ್ ರಷ್​ ಆಗಿದ್ದು ಜನರು ಹೈರಾಣಾಗಿದ್ದಾರೆ. ಶಕ್ತಿ ಯೋಜನೆ ಎಫೆಕ್ಟ್​ನಿಂದ ಬಸ್​ಗಳು ತುಂಬಿ ತುಳುಕುತ್ತಿದ್ದು, ಸದ್ಯ ಮಹಿಳೆಯೊಬ್ಬರು (Woman) ಮಗುವನ್ನು ಹೊತ್ತುಕೊಂಡು ಬಸ್​ ಬಾಗಿಲಲ್ಲೇ ಕುಳಿತು ಪ್ರಯಾಣ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಗದಗ ನಗರದಿಂದ ಜಿಲ್ಲಾಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಅಂದಾಜು ಒಂದು ವರ್ಷದ ಮಗುವನ್ನ ಕಂಕುಳಲ್ಲಿಟ್ಟುಕೊಂಡು ಮಹಿಳೆ ಪ್ರಯಾಣಿಸಿದ್ದಾರೆ. ಬಸ್ ಫುಲ್ ರಷ್ ಇದ್ದ ಹಿನ್ನೆಲೆ ಸೀಟ್ ಸಿಗದೇ ಬಾಗಿಲಲ್ಲೇ ಕುಳಿತುಕೊಂಡಿದ್ದಾರೆ. ಸ್ವಲ್ಪ ಯಾಮಾರಿದರೂ ತಾಯಿ ಹಾಗೂ ಮಗುವಿಗೆ ಅಪಾಯ ಗ್ಯಾರಂಟಿ. ಮಹಿಳಯೊಬ್ಬರು ಬಾಗಿಲಲ್ಲೇ ಕುಳಿತಿದ್ದರು ಚಾಲಕ ಹಾಗೂ ನಿರ್ವಾಹಕರು ನಿರ್ಲಕ್ಷ್ಯ ತೋರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Aug 11, 2023 03:55 PM