‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
Game Changer: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಇಂದು (ಜನವರಿ 10) ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಸಹ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬಂದಿದ್ದು, ಬೆಂಗಳೂರಿನಲ್ಲಿ ರಾಮ್ ಚರಣ್ ಅಭಿಮಾನಿಗಳು ಕಟೌಟ್ ನಿಲ್ಲಿಸಿ, ಪೋಸ್ಟರ್ಗಳನ್ನು ಅಂಟಿಸಿ, ಬೆಳ್ಳಂಬೆಳಿಗ್ಗೆ ಚಿತ್ರಮಂದಿರಗಳ ಮುಂದೆ ಪಟಾಕಿಗಳನ್ನು ಹಚ್ಚಿ ಸಿನಿಮಾಕ್ಕೆ ಸ್ವಾಗತ ಕೋರಿದ್ದಾರೆ. ಇಲ್ಲಿದೆ ವಿಡಿಯೋ.
ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಇಂದು (ಜನವರಿ 10) ಆಗಿದೆ. ಕರ್ನಾಟಕದಲ್ಲಿಯೂ ಸಹ ನೂರಾರು ಚಿತ್ರಮಂದಿರಗಳಲ್ಲಿ ‘ಗೇಮ್ ಚೇಂಜರ್’ ಬಿಡುಗಡೆ ಆಗಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಿಗ್ಗೆ ಸಿನಿಮಾದ ಶೋಗಳ ಪ್ರದರ್ಶನ ಆಗಿವೆ. ನಗರದ ಊರ್ವಶಿ ಚಿತ್ರಮಂದಿರದಲ್ಲಿ ರಾಮ್ ಚರಣ್ ಅಭಿಮಾನಿಗಳು ‘ಗೇಮ್ ಚೇಂಜರ್’ ಸಿನಿಮಾವನ್ನು ಸ್ವಾಗತಿಸಿದ ಪರಿ ಹೀಗಿತ್ತು. ಚಿತ್ರಮಂದಿರದ ಮುಂದೆ ಪಟಾಕಿ ಹೊಡೆದು ಸಂಭ್ರಮದಿಂದ ‘ಗೇಮ್ ಚೇಂಜರ್’ ಸಿನಿಮಾ ಅನ್ನು ಅಭಿಮಾನಿಗಳು ಸ್ವಾಗತಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ