ಬಹುನಿರೀಕ್ಷಿತ ‘ವೇದ’ ಸಿನಿಮಾ ಇಂದು (ಡಿ.23) ಬಿಡುಗಡೆ ಆಗಿದೆ. ಇದು ಗೀತಾ ಶಿವರಾಜ್ಕುಮಾರ್ (Geetha Shivarajkumar) ನಿರ್ಮಾಣದ ಮೊದಲ ಸಿನಿಮಾ ಎಂಬುದು ವಿಶೇಷ. ಶಿವಣ್ಣ ನಟಿಸಿದ 125ನೇ ಚಿತ್ರವಾಗಿ ‘ವೇದ’ (Vedha Movie) ಮೂಡಿಬಂದಿದೆ. ಈ ಚಿತ್ರದಲ್ಲಿ ಅವರ ಜೊತೆ ನಟಿಸಿದ ಅದಿತಿ ಸಾಗರ್ ಮತ್ತು ಗಾನವಿ ಲಕ್ಷ್ಮಣ್ (Ganavi Laxman) ಅವರಿಗೆ ಖ್ಯಾತಿ ಸಿಕ್ಕಿದೆ. ಅವರ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಗೀತಾ ಶಿವರಾಜ್ಕುಮಾರ್ ಮಾತಾಡಿದ್ದಾರೆ. ‘ಆ ಇಬ್ಬರು ಹೆಣ್ಮಕ್ಕಳಿಗೆ ಒಳ್ಳೆಯ ಹೆಸರು ಬಂದಿರುವುದು ಖುಷಿ ಆಗಿದೆ’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:53 pm, Fri, 23 December 22