ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ: ದೂರು ನೀಡಿದ್ರೆ ಪೊಲೀಸರಿಗೆ ಮಹಿಳಾ ಪರ ಕಾನೂನಿನ ಭಯ

Updated on: Mar 05, 2026 | 4:17 PM

ಪ್ರೀತಿಯ ಹೆಸರಿನಲ್ಲಿ ಆರಂಭವಾದ ಬ್ರಜೇಶ್-ಅನಿತಾ ಜೀವನ, ಪತ್ನಿಯ ದೌರ್ಜನ್ಯದಿಂದ ರಕ್ತಪಾತಕ್ಕೆ ತಿರುಗಿದೆ. ಪತಿ ಮತ್ತು ತಾಯಿಯ ಮೇಲೆ ಪತ್ನಿ ನಡೆಸಿದ ಹಲ್ಲೆಯು, ಭಾರತದ ಲಿಂಗ ಆಧಾರಿತ ಕಾನೂನುಗಳ ಕುರಿತು ಚರ್ಚೆ ಹುಟ್ಟುಹಾಕಿದೆ. ಪುರುಷರಿಗೆ ನಿರ್ದಿಷ್ಟ ಕಾನೂನು ರಕ್ಷಣೆಯ ಕೊರತೆಯಿದ್ದು, ಮಹಿಳೆಯರ ಪರ ಕಾನೂನುಗಳ ದುರುಪಯೋಗ ತಡೆಯಲು ಲಿಂಗ ತಟಸ್ಥ ಕಾನೂನುಗಳ ಅಗತ್ಯವಿದೆ.

ಗೊಂಡಾ, ಮಾ.3: ಪ್ರೀತಿಯ ಹೆಸರಿನಲ್ಲಿ ಆರಂಭವಾದ ಜೀವನವು ಇಂದು ರಕ್ತಪಾತ ಮತ್ತು ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದೆ. ಲೊಕೊ ಪೈಲಟ್ ಬ್ರಜೇಶ್ ಮೌರ್ಯ ಮತ್ತು ಅವರ ವೃದ್ಧ ತಾಯಿಯ ಮೇಲೆ ಪತ್ನಿ ಅನಿತಾ ಎಸಗಿರುವ ದೌರ್ಜನ್ಯವು ಭಾರತದ ಪ್ರಸ್ತುತ “ಲಿಂಗ ಆಧಾರಿತ” ಕಾನೂನುಗಳ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಬ್ರಜೇಶ್ ಮತ್ತು ಅನಿತಾ 2022 ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, 2025 ರ ವ್ಯಾಲೆಂಟೈನ್ಸ್ ದಿನದಂದು ವಿವಾಹವಾಗಿದ್ದರು. ವಿವಾಹದ ಕೆಲವೇ ದಿನಗಳಲ್ಲಿ ಪತಿ ಮತ್ತು ಅತ್ತೆ-ಮಾವನ ಮೇಲೆ ಅನಿತಾ ಕಿರುಕುಳ ನೀಡಲು ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಅತ್ತೆ-ಮಾವನನ್ನು ಮನೆಯಿಂದ ಹೊರಹಾಕಲು ಆಕೆ ಹಠ ಹಿಡಿದಿದ್ದಳು ಎಂದು ಹೇಳಿದೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಅನಿತಾ ತನ್ನ ಪತಿ ಬ್ರಜೇಶ್ ಮತ್ತು ಅತ್ತೆ ಸರಿತಾ ದೇವಿ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬ್ರಜೇಶ್ ಪೊಲೀಸರ ಮೊರೆ ಹೋದರೂ, ಪುರುಷ ಎನ್ನುವ ಕಾರಣಕ್ಕೆ ಅಥವಾ ಮಹಿಳಾ ಪರ ಕಾನೂನುಗಳ ಭಯದಿಂದ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ IPC 498A ಅಥವಾ ಗೃಹಹಿಂಸೆ ತಡೆ ಕಾಯ್ದೆ (DV Act) ಅಡಿಯಲ್ಲಿ ಪ್ರಬಲ ಕಾನೂನುಗಳಿವೆ. ಆದರೆ, ಪತಿಯ ಮೇಲೆ ಪತ್ನಿ ದೌರ್ಜನ್ಯ ನಡೆಸಿದರೆ ಅವನನ್ನು ರಕ್ಷಿಸಲು ನಿರ್ದಿಷ್ಟವಾದ “ಲಿಂಗ ತಟಸ್ಥ” (Gender Neutral) ಕಾನೂನುಗಳ ಕೊರತೆ ಇದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More