Giant wheel stuck: ರಾಜಧಾನಿಯಲ್ಲಿ ನವರಾತ್ರಿ ಮೇಳ ಸಂದರ್ಭ ದಿಢೀರನೆ ಸ್ಥಗಿತಗೊಂಡ ದೈತ್ಯ ಚಕ್ರ; 50 ಮಂದಿಯ ರಕ್ಷಣೆ

|

Updated on: Oct 21, 2023 | 12:12 PM

ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿರುವುದು ಕಂಡುಬಂದಿದೆ. ಸ್ವಿಂಗ್‌ನ ಚಕ್ರವು ಕೆಲಸ ಮಾಡುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಈ ಘಟನೆ ನಡೆದಿದೆ. ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸದಿಲ್ಲಿ, ಅಕ್ಟೋಬರ್ 21: ದೆಹಲಿಯ ನರೇಲಾ ಪ್ರದೇಶದಲ್ಲಿ ಮೊನ್ನೆ ರಾತ್ರಿ ನವರಾತ್ರಿ ಮೇಳದಲ್ಲಿ ತಾಂತ್ರಿಕ ದೋಷದಿಂದಾಗಿ ಫೆರ್ರಿಸ್ ಜಯಿಂಟ್​ ವೀಲ್ (ದೈತ್ಯ ಚಕ್ರ) ಸವಾರಿ ದಿಢೀರನೆ ಸ್ಥಗಿತಗೊಂಡು (Giant wheel stuck) ಅದರಲ್ಲಿ ಸಿಲುಕಿದ್ದ ಸುಮಾರು 50 ಜನರನ್ನು ಪಾರು ಮಾಡಲಾಗಿದೆ. ಮಾಹಿತಿ ಪಡೆಯುತ್ತಿದ್ದಂತೆ ದೆಹಲಿ ಪೊಲೀಸರು ಕಾರ್ಯಾಚರಣೆಗೆ ಇಳಿದರು. ತಾಂತ್ರಿಕ ಸಿಬ್ಬಂದಿ ಮತ್ತು ಇತರರ ಸಹಾಯದಿಂದ ಅದರಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದರು (rescued safely). ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 10:30 ರ ಸುಮಾರಿಗೆ ಚಕ್ರವು ತಿರುಗುವುದನ್ನು ನಿಲ್ಲಿಸಿತು. ದೈತ್ಯ ಚಕ್ರ ಮೇಲಿನ ಸ್ತರಗಳಲ್ಲಿದ್ದ ಜನರು ಸುಮಾರು ಅರ್ಧ ಗಂಟೆ ಕಾಲ ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು.

ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿರುವುದು ಕಂಡುಬಂದಿದೆ. ಸ್ವಿಂಗ್‌ನ ಚಕ್ರವು ಕೆಲಸ ಮಾಡುವುದನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ ಈ ಘಟನೆ ನಡೆದಿದೆ. ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ, ಗಣೇಶ ಚತುರ್ಥಿ ಸಂದರ್ಭದಲ್ಲಿ ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಜಾತ್ರೆಯಲ್ಲಿ ಬಾಲಕಿಯ ಕೂದಲು ಇಂತಹುದೇ ಫೆರಿ ಚಕ್ರದಲ್ಲಿ ಸಿಲುಕಿಕೊಂಡಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ