ದೊಡ್ಡಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್ ಡಿಪೋದಲ್ಲಿ ಬಾಲ ಕಾರ್ಮಿಕರ‌ ಬಳಕೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ದೊಡ್ಡಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್ ಡಿಪೋದಲ್ಲಿ ಬಾಲ ಕಾರ್ಮಿಕರ‌ ಬಳಕೆ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 21, 2023 | 1:10 PM

ದೊಡ್ಡಬಳ್ಳಾಪುರ ಕೆಎಸ್​ಆರ್​ಟಿಸಿ ಬಸ್ ಡಿಪೋದಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳ ಕಸ ಗುಡಿಸಲು ಬಾಲಕನಿಗೆ ತಿಂಗಳಿಗೆ ಐದು ಸಾವಿರ ನೀಡುತ್ತಿದ್ದಾರೆ.  ಕೆಲಸಗಾರರನ್ನ ನೇಮಕ ಮಾಡಿಕೊಂಡರೆ, ಹೆಚ್ಚುವರಿ ಸಂಬಳ‌ ನೀಡಬೇಕಾಗುತ್ತದೆ. ಈ ಉದ್ದೇಶದಿಂದ ಬಾಲಕಾರ್ಮಿಕರಿಗೆ ಐದು ಸಾವಿರ ಕೊಟ್ಟು ಅಧಿಕಾರಿಗಳು ಕೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು ಗ್ರಾಮಾಂತರ ಅ.21: ಬಾಲ ಕಾರ್ಮಿಕನಿಂದ ಕೆಎಸ್ಆರ್​ಟಿಸಿ(KSRTC) ಬಸ್​ಗಳ ಕ್ಲೀನಿಂಗ್ ಮಾಡಿಸಿದ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapur) ಕೆಎಸ್ಆರ್​ಟಿಸಿ ಬಸ್ ಡಿಪೋದಲ್ಲಿ ಕಂಡುಬಂದಿದೆ. ಹೌದು, ಬಾಲ ಕಾರ್ಮಿಕರನ್ನು ಬಳಸಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರಿ ಬಸ್ಸುಗಳ ಕಸ ಗುಡಿಸಲು ಬಾಲಕನಿಗೆ ತಿಂಗಳಿಗೆ ಐದು ಸಾವಿರ ನೀಡುತ್ತಿದ್ದಾರೆ.  ಕೆಲಸಗಾರರನ್ನ ನೇಮಕ ಮಾಡಿಕೊಂಡರೆ, ಹೆಚ್ಚುವರಿ ಸಂಬಳ‌ ನೀಡಬೇಕಾಗುತ್ತದೆ. ಈ ಉದ್ದೇಶದಿಂದ ಬಾಲಕಾರ್ಮಿಕರಿಗೆ ಐದು ಸಾವಿರ ಕೊಟ್ಟು ಅಧಿಕಾರಿಗಳು ಕೆಲಸ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಇನ್ನು ಓದುವುದನ್ನ ಬಿಟ್ಟು ಈ ಬಾಲಕ ಸಾರಿಗೆ ಬಸ್ ಗಳ ಸ್ವಚ್ಚತೆಯ ಕೆಲಸ ಮಾಡುತ್ತಿದ್ದಾನೆ. ಆದರೆ, ಕಂಡು ಕಾಣದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ