ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ

Updated on: Dec 24, 2025 | 11:46 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಸೂಪರ್ ಎಂಟರ್​​ಟೇನರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ವಾರ ಅವರು ಬಿಗ್ ಬಾಸ್​​ಗೆ ಬಂದು ಧನು ಜೊತೆ ಮಾತನಾಡಿದ್ದಾರೆ. ಈ ವೇಳೆ ಅವರು ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಈ ವಾರ ಫ್ಯಾಮಿಲಿ ವೀಕ್. ಈ ವೇಳೆ ಧನುಷ್ ತಾಯಿ ಅವರು ಬಿಗ್ ಬಾಸ್​​ಗೆ ಬಂದಿದ್ದಾರೆ. ಆಗ ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ‘ಧನುಷ್ ಇಲ್ಲ ಎಂದಿದ್ರೆ ಎಲ್ಲಾ ವೋಟ್​​ನ ಗಿಲ್ಲಿಗೆ ಹಾಗ್ತಾ ಇದ್ದೆ. ಅವನ ಕಾಮಿಡಿ ಇಷ್ಟ ಆಗುತ್ತದೆ. ಅವನು ಇಲ್ದೆ ಇದ್ದಿದ್ರೆ ಎಲ್ಲರಿಗೂ ಬೇಸರ ಬರುತ್ತಿತ್ತು’ ಎಂದಿದ್ದಾರೆ. ಈ ಮಾತನ್ನು ಕೇಳಿ ಮನೆಯವರಿಗೆ ಅಚ್ಚರಿ ಆಗಿದೆ. ಇದು ಗಿಲ್ಲಿ ಫ್ಯಾನ್​ ಬೇಸ್ ಎಷ್ಟಿದೆ ಎಂಬುದನ್ನು ಹೇಳುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Dec 24, 2025 11:44 AM