ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಮೃತದೇಹ ಪತ್ತೆ: ಸಾವಿನ ಕಾರಣ ನಿಗೂಢ
ಬೆಂಗಳೂರಿನ ಗಾಯತ್ರಿ ನಗರದಲ್ಲಿ ದಾವಣಗೆರೆ ಮೂಲದ ಸುಪ್ರಿಯಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಿಂದ ಲಾಕ್ ಆಗಿದ್ದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಕೊಳೆತ ಮೃತದೇಹ ಪತ್ತೆಯಾಗಿದೆ. ನೆರೆಹೊರೆಯವರ ಪ್ರಕಾರ, ಸುಪ್ರಿಯಾ ಬೈಕ್ ಸವಾರಿ ಪ್ರಿಯೆಯಾಗಿದ್ದು, ಇತ್ತೀಚೆಗೆ ದೈಹಿಕವಾಗಿ ದುರ್ಬಲರಾಗಿದ್ದರು.
ಬೆಂಗಳೂರು, ನವೆಂಬರ್ 02: ಗಾಯತ್ರಿ ನಗರದ ರೈಲ್ವೆ ಪ್ಯಾರಲಲ್ ರಸ್ತೆ ಬಳಿ ದಾವಣಗೆರೆ (Davanagere) ಮೂಲದ ಸುಪ್ರಿಯಾ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಿಂದ ಲಾಕ್ ಆಗಿದ್ದ ಅವರ ಮನೆಯಲ್ಲಿ, ಮೃತದೇಹ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ನೆರೆಹೊರೆಯವರ ಹೇಳಿಕೆಯ ಪ್ರಕಾರ, ಕಳೆದ ಒಂದೂವರೆ ಎರಡು ತಿಂಗಳಿಂದ ಅವರ ಚಲನವಲನ ಕಡಿಮೆಯಾಗಿತ್ತು. ಸುಪ್ರಿಯಾ ಬೈಕ್ಗಳನ್ನು ಓಡಿಸುವಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಇತ್ತೀಚೆಗೆ ಅವರು ದೈಹಿಕವಾಗಿ ದುರ್ಬಲರಾಗಿದ್ದರು. ಡಯಟಿಷಿಯನ್‌ನ ಸಲಹೆಯಂತೆ ಆಹಾರ ಪದ್ಧತಿ ಅನುಸರಿಸುತ್ತಿರುವುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
