ಬಣ್ಣ ಬಣ್ಣದ ಸುಳ್ಳು ಹೇಳಿದ ಸುರೇಶ್; ಆದ್ರೆ ಹನುಮಂತನ ಮುಂದೆ ನಡೆಯಲಿಲ್ಲ ಆಟ

Updated on: Nov 06, 2024 | 7:36 PM

ಬಿಗ್ ಬಾಸ್​ ಮನೆಯಲ್ಲಿ ಸಿಂಗರ್ ಹನುಮಂತ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಮುಲಾಜು ಇಲ್ಲದೇ ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಿದ್ದಾರೆ. ಆಪ್ತವಾಗಿ ಇರುವವರನ್ನು ಕೂಡ ಅವರು ನಿಷ್ಠುರವಾಗಿ ನಾಮಿನೇಟ್ ಮಾಡುತ್ತಿದ್ದಾರೆ. ಅದೇ ರೀತಿ, ಕಾಮಿಡಿ ಮಾಡುವುದರಲ್ಲೂ ಅವರು ಹಿಂದೆ ಬಿದ್ದಿಲ್ಲ.

ಗೋಲ್ಡ್ ಸುರೇಶ್ ಅವರು ಮೋಡದಿಂದ ಪಲ್ಯ ಮಾಡಬಹುದು ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಮೋಕ್ಷಿತಾ, ಐಶ್ವರ್ಯಾ, ಧನರಾಜ್, ಹನುಮಂತ ಅವರಿಗೆ ಅಚ್ಚರಿ ಆಗಿದೆ. ಗೋಲ್ಡ್ ಸುರೇಶ್ ಹೇಳಿದ್ದು ಸುಳ್ಳು ಎಂದು ಹನುಮಂತ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ಮುಗ್ಧನಂತೆ ಕಂಡರೂ ಕೂಡ ಹನುಮಂತನ ಮುಂದೆ ಇಂಥ ಆಟ ನಡೆಯೋದಿಲ್ಲ ಎಂಬುದು ಗೋಲ್ಡ್ ಸುರೇಶ್ ಅವರಿಗೆ ಅರ್ಥ ಆದಂತಿದೆ. ಈ ಸಂಚಿಕೆ ನ.6ರಂದು ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More