ಹನುಮಂತನ ಕ್ಯಾಪ್ಟೆನ್ಸಿಯಲ್ಲಿ ಮತ್ತೆ ರಣರಂಗ ಆಗುತ್ತಿದೆ ಬಿಗ್ ಬಾಸ್ ಮನೆ

ಸಿಂಗರ್ ಹನುಮಂತ ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ಸಾಕಷ್ಟು ವಿಷಯಗಳು ಬದಲಾಗಿವೆ. ಮೊದಲಿಗೆ ಸೈಲೆಂಟ್ ಆಗಿದ್ದ ಹನುಮಂತ ಅವರು ಈಗ ಬಿಗ್ ಬಾಸ್ ಆಟದ ರೀತಿ-ನೀತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಎರಡು ಬಾರಿ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದಾಗಲೇ ದೊಡ್ಡ ದೊಡ್ಡ ಜಗಳಗಳು ನಡೆಯುತ್ತಿವೆ.

ಹನುಮಂತನ ಕ್ಯಾಪ್ಟೆನ್ಸಿಯಲ್ಲಿ ಮತ್ತೆ ರಣರಂಗ ಆಗುತ್ತಿದೆ ಬಿಗ್ ಬಾಸ್ ಮನೆ
ಬಿಗ್ ಬಾಸ್ ಕನ್ನಡ ಸೀಸನ್​ 11
Follow us
|

Updated on: Nov 05, 2024 | 10:19 PM

ಬೇರೆ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಸಿಂಗರ್ ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್​ ಮೂಲಕ ಬಂದರು. ಅವರು ಮುಗ್ಧತೆಯಿಂದ ಗಮನ ಸೆಳೆಯುತ್ತಿದ್ದಾರೆ. ಆದರೆ ಅವರು ನಿಜಕ್ಕೂ ಮುಗ್ಧ ಹೌದೋ ಅಲ್ಲವೋ ಎಂಬ ಅನುಮಾನ ಎಲ್ಲರಲ್ಲೂ ಇದೆ. ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಅವರಿಗೆ ಕೆಲವು ವಿಷಯಗಳು ತಿಳಿದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಅವರು ಎಲ್ಲರಿಗಿಂತಲೂ ಚೆನ್ನಾಗಿ ಈ ಆಟವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ನಂತರ ಗೊತ್ತಾಯಿತು. ಕ್ಯಾಪ್ಟನ್ ಆಗಿರುವ ಹನುಮಂತ ಅವರು ದೊಡ್ಡ ಜಗಳಕ್ಕೆ ಸಾಕ್ಷಿ ಆಗಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯಲ್ಲಿ ಇರುವ ಸದಸ್ಯರಿಗೆ ಹೊಸ ಟಾಸ್ಕ್ ನೀಡಲಾಗಿದೆ. ಇದು ಸಾಮಾನ್ಯವಾದ ಟಾಸ್ಕ್​ ಅಲ್ಲ. 4 ತಂಡಗಳಲ್ಲಿ ಈ ಆಟವನ್ನು ಆಡಬೇಕು. ಗೆದ್ದ ತಂಡಕ್ಕೆ ಸಿಕ್ಕಾಪಟ್ಟೆ ಸೌಕರ್ಯಗಳು ಸಿಗಲಿದೆ. ಹನುಮಂತ ಅವರಿಗೆ ವಿಶೇಷ ಅಧಿಕಾರ ಸಿಗಲಿದೆ. ಕೆಲವರಿಗೆ ಇಮ್ಯುನಿಟಿ ಕಾರ್ಡ್​ ಸಿಗಲಿದೆ. ಅದಕ್ಕಾಗಿ ಎಲ್ಲರೂ ಗುದ್ದಾಡುತ್ತಿದ್ದಾರೆ. ಆದರೆ ಸೋತ ತಂಡಕ್ಕೆ ತುಂಬ ತೊಂದರೆ ಆಗಲಿದೆ. ಹಲವು ಸೌಕರ್ಯಗಳನ್ನು ಅವರಿಂದ ಕಸಿದುಕೊಳ್ಳಲಾಗುವುದು. ಊಟದಲ್ಲೂ ಇತಿಮಿತಿ ಹಾಕಲಾಗುವುದು.

ಆಟದ ಸೋಲು ಮತ್ತು ಗೆಲುವಿನ ಪರಿಣಾಮ ತೀವ್ರವಾಗಿ ಇರುವುದರಿಂದ ಎಲ್ಲ ಸ್ಪರ್ಧಿಗಳು ಈ ಟಾಸ್ಕ್​ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮಾಡು ಇಲ್ಲವೇ ಮಡಿ ಎಂಬ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಈ ಆಟದ ಉಸ್ತುವಾರಿ ವಹಿಸಿರುವ ಕ್ಯಾಪ್ಟನ್ ಹನುಮಂತ ಅವರು ಸರಿಯಾಗಿ ತಮ್ಮ ಕೆಲಸವನ್ನು ನಿಭಾಯಿಸಿಲ್ಲ ಎಂದು ಕೆಲವರು ಸ್ಪರ್ಧಿಗಳು ಕಿಡಿಕಾರಿದ್ದಾರೆ. ಆಟದ ತೀವ್ರತೆ ಹೆಚ್ಚಿದಂತೆಲ್ಲ ಜಗಳ ಕೂಡ ಹೆಚ್ಚಾಗಿದೆ.

ಇದನ್ನೂ ಓದಿ: ಹನುಮಂತ ಮುಗ್ಧನಾ? ಕಿಲಾಡಿಯಾ? ಬಿಗ್​ಬಾಸ್​ನಿಂದ ಹೊರಬಂದ ಮಾನಸ ಮಾತು

ಹನುಮಂತ ಅವರು ಯಾವುದೇ ಮುಲಾಜು ಇಲ್ಲದೇ ಬಿಗ್ ಬಾಸ್ ಆಟವನ್ನು ಆಡುತ್ತಿದ್ದಾರೆ. ನಾಮಿನೇಷನ್ ವಿಚಾರದಲ್ಲಿ ಅವರು ಸ್ವಲ್ಪವೂ ಹಿಂಜರಿಕೆ ಇಲ್ಲದೇ ಕೆಲವರ ಹೆಸರನ್ನು ಹೇಳುತ್ತಾರೆ. ಇನ್ನು ವಿಶೇಷ ಅಧಿಕಾರಗಳು ಸಿಕ್ಕರೆ ಅವರ ಆಟದ ವರಸೆ ಮತ್ತಷ್ಟು ಬಲವಾಗಲಿದೆ. ಕಾಮಿಡಿ ಮತ್ತು ಹಾಡಿನ ಮೂಲಕವೂ ಹನುಮಂತ ಅವರು ಮನರಂಜನೆ ನೀಡುತ್ತಿದ್ದಾರೆ. ವೀಕ್ಷಕರಿಗೆ ಅವರ ಆಟ ಇಷ್ಟ ಆಗುತ್ತಿದೆ. ಕಳೆದ ವಾರ ‘ಕಿಚ್ಚಾನ ಚಪ್ಪಾಳೆ’ ಕೂಡ ಹನುಂತ ಅವರಿಗೆ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕುಮಾರಣ್ಣನ ನೋಟು ಯೋಗೇಶ್ವರ್​ಗೆ ವೋಟು ನಿಮ್ಮ ಮಂತ್ರವಾಗಿರಬೇಕು: ಸುರೇಶ್
ಕುಮಾರಣ್ಣನ ನೋಟು ಯೋಗೇಶ್ವರ್​ಗೆ ವೋಟು ನಿಮ್ಮ ಮಂತ್ರವಾಗಿರಬೇಕು: ಸುರೇಶ್
ನಾಗೇಂದ್ರ ಯಾರಿಗೂ ಮೋಸ ಮಾಡಿಲ್ಲ, ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಶಿವಕುಮಾರ
ನಾಗೇಂದ್ರ ಯಾರಿಗೂ ಮೋಸ ಮಾಡಿಲ್ಲ, ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಶಿವಕುಮಾರ
ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕಾಗಿ ಹೋರಾಡುತ್ತೇನೆ: ದೇವೇಗೌಡ
ಶರೀರದಲ್ಲಿ ಕೊನೆ ಉಸಿರಿರುವವರೆಗೆ ನನ್ನ ಜನಕ್ಕಾಗಿ ಹೋರಾಡುತ್ತೇನೆ: ದೇವೇಗೌಡ
ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ
ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ
ಸಿಎಂ ಸುಳ್ಳು ಹೇಳಿ ಹುದ್ದೆಯ ಗೌರವಕ್ಕೆ ಕಳಂಕ ತರುತ್ತಿದ್ದಾರೆ: ಬೊಮ್ಮಾಯಿ
ಸಿಎಂ ಸುಳ್ಳು ಹೇಳಿ ಹುದ್ದೆಯ ಗೌರವಕ್ಕೆ ಕಳಂಕ ತರುತ್ತಿದ್ದಾರೆ: ಬೊಮ್ಮಾಯಿ
ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಜಿಲ್ಲೆಯ ಬಗ್ಗೆ ಪ್ರೀತಿಯಿದ್ದರೆ ಶಿವಕುಮಾರ್ ಉಸ್ತುವಾರಿ ಆಗಬೇಕಿತ್ತು: ಅಶೋಕ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ