ಉರಿಯುವ ಬೆಂಕಿಗೆ ತುಪ್ಪ; ಗುಟ್ಟಾಗಿ ನಡೆದ ಮಾತುಕತೆ ರಟ್ಟು ಮಾಡಿ ಜಗಳ ತಂದಿಟ್ಟ ಬಿಗ್ ಬಾಸ್

ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಸ್ಪರ್ಧಿಗಳ ರಹಸ್ಯ ಸಂಭಾಷಣೆಗಳು ಬಹಿರಂಗಗೊಂಡಿದ್ದು, ಮನೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಮಾಡಿದ ಕಮೆಂಟ್‌ಗಳು ಮತ್ತು ಅವರ ನಿಜವಾದ ಅಭಿಪ್ರಾಯಗಳು ಬಹಿರಂಗವಾಗಿವೆ. ಐಶ್ವರ್ಯಾ, ಭವ್ಯಾ ಮುಂತಾದವರ ಬಗ್ಗೆ ನಡೆದ ಮಾತುಕತೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಈ ಘಟನೆಯಿಂದ ಮನೆಯ ವಾತಾವರಣ ಬದಲಾಗಿದೆ.

ಉರಿಯುವ ಬೆಂಕಿಗೆ ತುಪ್ಪ; ಗುಟ್ಟಾಗಿ ನಡೆದ ಮಾತುಕತೆ ರಟ್ಟು ಮಾಡಿ ಜಗಳ ತಂದಿಟ್ಟ ಬಿಗ್ ಬಾಸ್
ಬಿಗ್ ಬಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 05, 2024 | 7:05 AM

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಾ ಇರುತ್ತವೆ. ಒಬ್ಬರು ಆಡಿದ ಮಾತನ್ನು ಮತ್ತೊಬ್ಬರಿಗೆ ತೋರಿಸೋದಿಲ್ಲ. ಹೀಗೆ ತೋರಿಸಿದರೆ ಇಡೀ ಮನೆ ರಣರಂಗ ಆಗುತ್ತದೆ. ಈ ಕಾರಣಕ್ಕೆ ಒಬ್ಬರ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎಂಬ ವಿಡಿಯೋನ ತೋರಿಸಲ್ಲ. ಆದರೆ, ಈ ಬಾರಿ ಮನೆಯವರ ಮಧ್ಯೆ ಪಿಟ್ಟಿಂಗ್ ಇಡುವ ಕೆಲಸ ಆಗಿದೆ. ಇದರಿಂದ ಇಡೀ ಮನೆ ಹೊತ್ತು ಉರಿದಿದೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಆದರೆ, ಎದುರಿನಿಂದ ಎಲ್ಲರೂ ಒಳ್ಳೆಯವರ ರೀತಿ ತೋರಿಸಿಕೊಳ್ಳುತ್ತಾರೆ. ಹಿಂದಿನಿಂದ ಆಡಿದ ಮಾತುಗಳು ಯಾರಿಗೂ ತಿಳಿಯಲ್ಲ ಎನ್ನುವ ಧೈರ್ಯದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಇರುತ್ತಾರೆ. ಈಗ ಹಿಂದಿನಿಂದ ಆಡಿದ ಮಾತುಗಳೇ ಅವರಿಗೆ ಮುಳುವಾಗಿದೆ.

ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಈ ಚಟುವಟಿಕೆಯ ಪ್ರಕಾರ ಪ್ರತಿ ಸ್ಪರ್ಧಿಯ ಫೋಟೋ ಬರುತ್ತದೆ ಮತ್ತು ಅವರು ಆಡಿದ ಮಾತನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ಯಾವ ಜಾಗದಲ್ಲಿ ಹೇಳಲಾಗಿದೆ ಎಂಬುದನ್ನು ಊಹಿಸಬೇಕು. ಸರಿಯಾಗಿ ಊಹಿಸಿದರೆ ಮನೆಗೆ ದಿನಸಿ ಸಿಗುತ್ತದೆ. ಆ ಬಳಿಕ ವಿಡಿಯೋ ಕೂಡ ಪ್ರಸಾರ ಮಾಡಲಾಗುತ್ತದೆ.

ಸದ್ಯ ಪ್ರಸಾರ ಮಾಡಿರುವ ವಿಡಿಯೋಗಳು ಇಡೀ ಮನೆಯನ್ನು ಹೊತ್ತು ಉರಿಯುವಂತೆ ಮಾಡಿದೆ. ಗುಟ್ಟಾಗಿ ನಡೆದ ಮಾತುಗಳು ರಿವೀಲ್ ಆಗಿವೆ. ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗಿಯ ಹೆಸರನ್ನು ಬಿಗ್ ಬಾಸ್​ನಲ್ಲಿ ರಿವೀಲ್ ಮಾಡಿದ ಹನುಮಂತ?

ಗುಟ್ಟಾಗಿ ನಡೆದ ಮಾತುಕತೆಗಳು ರಿವೀಲ್ ಆಗುವುದು ತುಂಬಾನೇಕಡಿಮೆ. ಈ ರೀತಿ ಮಾತುಕತೆ ರಿವೀಲ್ ಆಗುತ್ತಾ ಹೋದರೆ ಪ್ರತಿ ಸ್ಪರ್ಧಿ ಬಗ್ಗೆ ಸಹ ಸ್ಪರ್ಧಿಗೆ ಇರುವ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಆಗಿದೆ.. ಐಶ್ವರ್ಯಾ ಅವರು ಅಸಮರ್ಥರು ಎಂದು ಸುರೇಶ್ ಮಾತನಾಡಿದ್ದರು. ಅದೇ ರೀತಿ ಭವ್ಯಾ ಬಗ್ಗೆ ಮೋಕ್ಷಿತಾ ಹಾಗೂ ಕೆಲವರು ಕಮೆಂಟ್ ಪಾಸ್ ಮಾಡಿದ್ದರು. ಇದು ಕೂಡ ಸಖತ್ ಚರ್ಚೆ ಆಗುತ್ತಿದೆ. ತ್ರಿವಿಕ್ರಂ ಹೇಳಿದ ಮಾತಿನಿಂದ ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Tue, 5 November 24

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?