ಬಿಗ್ ಬಾಸ್ ಹಾಗೂ ಧಾರಾವಾಹಿಗಳ​ ಟಿಆರ್​ಪಿ ಔಟ್; ಇಲ್ಲಿದೆ ಸಂಪೂರ್ಣ ವಿವರ

43ನೇ ವಾರದ ಟಿಆರ್​ಪಿ ವರದಿ ಬಿಡುಗಡೆಯಾಗಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಅಗ್ರಸ್ಥಾನದಲ್ಲಿದೆ. ಬಿಗ್ ಬಾಸ್ ಕೂಡಾ ಉತ್ತಮ ಟಿಆರ್​ಪಿ ಪಡೆದಿದೆ. ‘ಅಮೃತಧಾರೆ’ ಮತ್ತು ‘ಲಕ್ಷ್ಮೀ ನಿವಾಸ’ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ.

ಬಿಗ್ ಬಾಸ್ ಹಾಗೂ ಧಾರಾವಾಹಿಗಳ​ ಟಿಆರ್​ಪಿ ಔಟ್; ಇಲ್ಲಿದೆ ಸಂಪೂರ್ಣ ವಿವರ
ಬಿಗ್ ಬಾಸ್ ಹಾಗೂ ಧಾರಾವಾಹಿಗಳ​ ಟಿಆರ್​ಪಿ ಔಟ್
Follow us
|

Updated on: Nov 04, 2024 | 3:14 PM

ದೀಪಾವಳಿ ಪ್ರಯುಕ್ತ ಕಳೆದ ವಾರ ಸಾಲು ಸಾಲು ರಜೆಗಳು ಇದ್ದವು. ಹೀಗಾಗಿ, 43ನೇ ವಾರದ ಟಿಆರ್​ಪಿ ಬಂದಿರಲಿಲ್ಲ. ಇಂದು (ನವೆಂಬರ್ 4) ಟಿಆರ್​ಪಿ ವಿವರ ಹೊರ ಬಿದ್ದಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನ ಪಡೆದಿದೆ. ಯಾರೂ ಊಹಿಸದ ಟ್ವಿಸ್ಟ್ ನೀಡಿದ ನಿರ್ದೇಶಕರನ್ನು ಶಪಿಸುತ್ತಲೇ ಧಾರಾವಾಹಿ ನೋಡಲಾಗಿದೆ. ಬಿಗ್ ಬಾಸ್ ಕೂಡ ಉತ್ತಮ ಟಿಆರ್​ಪಿ ಪಡೆದುಕೊಂಡಿದೆ.

43ನೇ ವಾರ ಎಂದರೆ ಜಗದೀಶ್ ಅವರು ಎಲಿಮಿನೇಟ್ ಆದ ವಾರ. ಅವರು ಅರ್ಧಕ್ಕೆ ಬಿಗ್ ಬಾಸ್​ನಿಂದ ಹೊರ ನಡೆದಿದ್ದರು. ಈ ವೇಳೆ ಕಿಚ್ಚ ಸುದೀಪ್ ಅವರು ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರ ಬಿಗ್ ಬಾಸ್​ಗೆ ವಾರದ ದಿನಗಳಲ್ಲಿ 7 ಟಿವಿಆರ್​ ಸಿಕ್ಕಿದೆ. ಶನಿವಾರ 7.9 ಟಿವಿಆರ್ ಹಾಗೂ ಭಾನುವಾರ 9.4 ಟಿಆರ್​ಪಿ ಸಿಕ್ಕಿದೆ.

ಧಾರಾವಾಹಿ ವಿಚಾರಕ್ಕೆ ಬರೋದಾದರೆ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿದೆ. ಸದ್ಯ ಸಂಜನಾ ಬುರ್ಲಿ ನಿರ್ವಹಿಸುತ್ತಿದ್ದ ಪಾತ್ರ ಕೊನೆ ಆಗಿದೆ. ಮುಂದಿನ ದಿನಗಳಲ್ಲಿ ಧಾರಾವಾಹಿಯ ಟಿಆರ್​ಪಿ ಕುಗ್ಗುವ ಸಾಧ್ಯತೆ ಇದೆ. ಎರಡನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ.

ಮೂರನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಮೊದಲು ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್​ಪಿ ಸ್ವಲ್ಪ ಕುಗ್ಗಿದೆ. ನಾಲ್ಕನೇ ಸ್ಥಾನದಲ್ಲಿ ಇತ್ತೀಚೆಗೆ ಪ್ರಸಾರ ಆರಂಭಿಸಿರೋ ‘ಅಣ್ಣಯ್ಯ’ ಧಾರಾವಾಹಿ ಇದೆ. ಅಕ್ಕ-ತಂಗಿ ಧಾರಾವಾಹಿ ಎಂದೇ ಫೇಮಸ್ ಆಗಿರೋ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯ ಲಕ್ಷ್ಮೀ’ ಧಾರಾವಾಹಿಗಳು ಐದನೇ ಸ್ಥಾನದಲ್ಲಿ ಇವೆ.

ಇದನ್ನೂ ಓದಿ: ಗುರುಪ್ರಸಾದ್ ಸಾವಿನ ಬಳಿಕ ಟೀಕೆ ಮಾಡಿದ ಜಗ್ಗೇಶ್​ಗೆ ಜಗದೀಶ್ ಕ್ಲಾಸ್

‘ಸೀತಾ ರಾಮ’ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿರುವುದರಿಂದ ಈ ಧಾರಾವಾಹಿ ನೋಡುವವರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಚೈತ್ರಾ, ತ್ರಿವಿಕ್ರಮ್ ನಂಟಿನ ಬಗ್ಗೆ ಗುಸುಗುಸು ಮಾತಾಡಿದ ಐಶ್ವರ್ಯಾ, ಸುರೇಶ್
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ಮಗನನ್ನು ಗೆಲ್ಲಿಸುವ ಛಲತೊಟ್ಟಿರುವ ಕುಮಾರಸ್ವಾಮಿಯಿಂದ ಭಿನ್ನ ರೀತಿಯ ಪ್ರಚಾರ
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ನಡುರಸ್ತೆಯಲ್ಲೇ ಕೋಲು ಹಿಡಿದು ಮಹಿಳೆಯರ ಹೊಡೆದಾಟ; ಸುತ್ತಲಿನ ಜನ ಕಂಗಾಲು
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಕೃಷ್ಣ ಭೈರೇಗೌಡನ ಕ್ಷೇತ್ರದಲ್ಲಿ ಜನ ರಸ್ತೆಪಕ್ಕ ಮಲಗುವ ಸ್ಥಿತಿ:ಕುಮಾರಸ್ವಾಮಿ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಬೆಂಗಳೂರಿನ ರಸ್ತೆಯಲ್ಲಿ 10 ವರ್ಷದ ಬಾಲಕನಿಂದ ಯುವತಿಗೆ ಕಿರುಕುಳ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಅನ್ನಪೂರ್ಣ ಗೆದ್ದರೆ ಮಾತ್ರ ಸಂಡೂರಿನ ಅಭಿವೃದ್ಧಿ ಸಾಧ್ಯ: ಸಿದ್ದರಾಮಯ್ಯ
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಆನ್​ಲೈನ್​ನಲ್ಲಿ ಬಿಬಿಎಂಪಿ ಇ ಖಾತಾ ಪಡೆಯವುದು ಹೇಗೆ? ಇಲ್ಲಿದೆ ಸರಳ ಮಾರ್ಗ !
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಚನ್ನಪಟ್ಟಣ ಪ್ರಚಾರದ ಬಗ್ಗೆ ಮತ್ತೊಮ್ಮೆ ಮೌನವಹಿಸಿ ಬೆನ್ನುಹಾಕಿದ ದೇವೇಗೌಡ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್
ಜಾತಿಗಳ ಆಧಾರದಲ್ಲಿ ಹಿಂದೂಗಳಿಗೆ ದೇವರುಗಳಿಲ್ಲ: ಬಸನಗೌಡ ಪಾಟೀಲ್ ಯತ್ನಾಳ್