ಪ್ರೀತಿಸಿದ ಹುಡುಗಿಯ ಹೆಸರನ್ನು ಬಿಗ್ ಬಾಸ್​ನಲ್ಲಿ ರಿವೀಲ್ ಮಾಡಿದ ಹನುಮಂತ?

ಹನುಮಂತ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಜೊತೆ ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಗೌತಮಿ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಗೌತಮಿ ಹಾಗೂ ಹನುಮಂತ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಈಗ ಅವರು ಹನುಮಂತನ ಪ್ರೀತಿ ಬಗ್ಗೆ ಕೇಳಿದ್ದಾರೆ.

ಪ್ರೀತಿಸಿದ ಹುಡುಗಿಯ ಹೆಸರನ್ನು ಬಿಗ್ ಬಾಸ್​ನಲ್ಲಿ ರಿವೀಲ್ ಮಾಡಿದ ಹನುಮಂತ?
ಹನುಮಂತ್
Follow us
ರಾಜೇಶ್ ದುಗ್ಗುಮನೆ
|

Updated on:Nov 04, 2024 | 10:32 PM

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಬಿಗ್ ಬಾಸ್​ಗೆ ಬಂದ ವಾರವೇ ಅವರು ಹಂಗಾಮಿ ಕ್ಯಾಪ್ಟನ್ ಆಗಿದ್ದರು. ಆ ಬಳಿಕ ಅವರು ತಮ್ಮ ಸ್ವಂತ ಪರಿಶ್ರಮದಿಂದ ಕ್ಯಾಪ್ಟನ್ ಆದರು. ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿದೆ. ಈಗ ಅವರು ತಮ್ಮ ಹುಡುಗಿಯ ಹೆಸರನ್ನು ಪರೋಕ್ಷವಾಗಿ ರಿವೀಲ್ ಮಾಡಿದ್ದಾರೆ.

ಹನುಮಂತ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಜೊತೆ ಬೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿರುವ ಕಾರಣಕ್ಕೆ ಎಲ್ಲರ ಜೊತೆಯೂ ಮಾತನಾಡುವ ಅನಿವಾರ್ಯತೆ ಇದೆ. ಅವರಿಗೆ ಗೌತಮಿ ಜೊತೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಗೌತಮಿ ಹಾಗೂ ಹನುಮಂತ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಈಗ ಅವರು ಹನುಮಂತನ ಪ್ರೀತಿ ಬಗ್ಗೆ ಕೇಳಿದ್ದಾರೆ.

‘ನಿಮ್ಮ ಹುಡುಗಿ ಹೆಸರು ಏನು? ಅವಳ ಹೆಸರನ್ನು ಹೇಳಿ. ಅವಳಿಗಾಗಿ ಹಾಡನ್ನು ಹೇಳಿ’ ಎಂದು ಹನುಮಂತ ಬಳಿ ಕೇಳಿದರು ಗೌತಮಿ. ‘ನನ್ನ ಹುಡುಗಿಯ ಹೆಸರು ಸರಸ್ವತಿ ಅಲ್ಲವೇ’ ಎಂದು ಧನರಾಜ್ ಬಳಿ ಕೇಳಿದ್ದಾರೆ ಹನುಮಂತ. ‘ನಿಮ್ಮ ಹುಡುಗಿಯ ಹೆಸರು ಸರಸ್ವತಿಯೇ’ ಎಂದು ಗೌತಮಿ ಕೇಳಿದರು. ಇಲ್ಲ ಎನ್ನುವ ಉತ್ತರ ಅವರ ಕಡೆಯಿಂದ ಬಂತು.

ಇದಾದ ಬಳಿಕ ಪ್ರೀತಿಸಿದ ಹುಡುಗಿಯ ಬಗ್ಗೆ ಹಾಡನ್ನು ಹೇಳಬೇಕು ಎಂಬುದು ಬಂದಾಗ ಹನುಮಂತ ಅವರು ‘ಪವಿತ್ರಾ’ ಎನ್ನುವ ಶಬ್ದವನ್ನು ಒತ್ತಿ ಒತ್ತಿ ಹೇಳಿದ್ದಾರೆ. ಹೀಗಾಗಿ, ಹನುಮಂತ ಅವರು ಪ್ರೀತಿಸಿದ ಹುಡುಗಿಯ ಹೆಸರು ಪವಿತ್ರಾ ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಆಟವನ್ನು ಎಲ್ಲರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡ ಹನುಮಂತ

ಮದುವೆ ಯಾವಾಗ ಎನ್ನುವ ಪ್ರಶ್ನೆಯೂ ಅವರಿಗೆ ಎದುರಾಗಿದೆ. ‘ಬಿಗ್ ಬಾಸ್​ನಿಂದ ಹೊರ ಹೋಗುತ್ತಿದ್ದಂತೆ ನಾನು ಮದುವೆ ಆಗುತ್ತೇನೆ’ ಎಂದು ಹನುಮಂತ ಹೇಳಿದ್ದಾರೆ. ಆದರೆ, ಇದನ್ನು ಯಾರೂ ಗಂಭೀರವಾಗಿ ಸ್ವೀಕರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:15 pm, Mon, 4 November 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್