ಈ ವಾರ ಧನರಾಜ್ ಎಲಿಮಿನೇಟ್ ಆಗೋದು ಪಕ್ಕಾ? ಇಲ್ಲಿದೆ ಲೆಕ್ಕಾಚಾರ

ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರನೇ ವಾರದಲ್ಲಿ ಧನರಾಜ್ ನಾಮಿನೇಷನ್ ಆಗಿದ್ದು, ಅವರ ಎಲಿಮಿನೇಷನ್ ಬಗ್ಗೆ ಚರ್ಚೆಗಳು ಜೋರಾಗಿದೆ. ಕ್ಯಾಪ್ಟನ್ ಹನುಮಂತ ಅವರು ಧನರಾಜ್ ಅವರನ್ನು ನಾಮಿನೇಟ್ ಮಾಡಿದ್ದು, ಇದರಿಂದ ಧನರಾಜ್ ಭಯಭೀತರಾಗಿದ್ದಾರೆ.

ಈ ವಾರ ಧನರಾಜ್ ಎಲಿಮಿನೇಟ್ ಆಗೋದು ಪಕ್ಕಾ? ಇಲ್ಲಿದೆ ಲೆಕ್ಕಾಚಾರ
ಧನರಾಜ್
Follow us
ರಾಜೇಶ್ ದುಗ್ಗುಮನೆ
|

Updated on: Nov 06, 2024 | 8:33 AM

‘ಬಿಗ್ ಬಾಸ್ ಕನ್ನಡ ಸೀಸನ್​ 11’ರಲ್ಲಿ ಈಗಾಗಲೇ ಐದು ವಾರಗಳು ಪೂರ್ಣಗೊಂಡಿವೆ. ಈ ವಾರ ಆರನೇ ವಾರದ ಎಲಿಮಿನೇಷನ್ ನಡೆಯಲಿದೆ. ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಇರುವ ಎಲ್ಲರೂ ಸ್ಟ್ರಾಂಗ್ ಸ್ಪರ್ಧಿಗಳೇ. ಹೀಗಾಗಿ, ಯಾರು ಎಲಿಮಿನೇಟ್ ಆಗುತ್ತಾರೆ ಯಾರು ಉಳಿದುಕೊಳ್ಳುತ್ತಾರೆ ಎಂದು ಹೇಳೋದು ಕಷ್ಟ. ಹೀಗಿರುವಾಗಲೇ ಈ ವಾರ ಧನರಾಜ್ ಎಲಿಮಿನೇಟ್ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಸ್ವತಃ ಧನರಾಜ್ ಅವರು ಈ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಈ ವಾರ ವಿವಿಧ ಟಾಸ್ಕ್​ಗಳ ಮೂಲಕ ನಾಮಿನೇಷನ್ ಮಾಡುವ ಅವಕಾಶ ನೀಡಲಾಗಿತ್ತು. ಟಾಸ್ಕ್ ಮಧ್ಯೆ ಕ್ಯಾಪ್ಟನ್ ಹನುಮಂತ ಅವರಿಗೆ ಮೂವರನ್ನು ನಾಮಿನೇಟ್ ಮಾಡುವ ಅವಕಾಶ ಸಿಕ್ಕಿತ್ತು. ಚೆನ್ನಾಗಿ ಆಡುತ್ತಿಲ್ಲ ಎನ್ನುವ ಕಾರಣ ನೀಡಿ ಮೋಕ್ಷಿತಾ ಅವರನ್ನು ಹನುಮಂತ ನಾಮಿನೇಟ್ ಮಾಡಿದರು. ಸುರೇಶ್ ಅವರು ನಿಮಿಷಕ್ಕೊಂದು ಮಾತನಾಡುತ್ತಿದ್ದಾರೆ ಎನ್ನುವ ಕಾರಣ ನೀಡಿ ನಾಮಿನೇಷನ್ ಮಾಡಿದರು. ಒಳ್ಳೆಯ ಪರ್ಫಾರ್ಮೆನ್ಸ್ ನೀಡಿಲ್ಲ ಎನ್ನುವ ಕಾರಣ ನೀಡಿ ಧನರಾಜ್ ಅವರನ್ನು ಹನುಮಂತ ನಾಮಿನೇಟ್ ಮಾಡಿದರು.

ಹನುಮಂತ ಹಾಗೂ ಧನರಾಜ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಹನುಮಂತ ಅವರು ಗೆಳೆಯನನ್ನೇ ನಾಮಿನೇಟ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ಇದು ಧನರಾಜ್​​ಗೂ ಶಾಕಿಂಗ್ ಎನಿಸಿದೆ. ಈ ಬಗ್ಗೆ ಹನುಮಂತ ಬಳಿ ಪ್ರಶ್ನೆ ಮಾಡಿದ್ದಾರೆ. ‘ನಾನು ಹೊರ ಹೋದರೆ’ ಎಂದು ಧನರಾಜ್ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಜಿಮ್ ಮಾಡಿದ್ರೆ ಸತ್ತಮೇಲೆ ಬೇರೆ ಕಡೆ ಸುಡ್ತಾರಾ’; ಹನುಮಂತನ ನೀತಿ ಪಾಠ

‘ನಾನು ನಾಮಿನೇಟ್ ಮಾಡಿದ ಬಳಿಕ ನೀನು ಹೊರಗೆ ಹೋಗ್ತೀಯಾ? ಹೊರಗೆ ಜನ ಇರ್ತಾರೆ ಅವರು ವೋಟ್ ಮಾಡ್ತಾರೆ’ ಎಂದರು ಹನುಮಂತ. ಕಳೆದ ವಾರದ ಒಂದು ಘಟನೆ ಅಲ್ಲಿದ್ದವರಿಗೆ ನೆನಪಾಯಿತು. ಕಳೆದ ವಾರ ಮಾನಸಾ ಅವರು ನಾಮಿನೇಟ್ ಆದಾಗ ಹನುಮಂತ ಅವರು ಇದೇ ರೀತಿಯ ಮಾತನ್ನು ಹೇಳಿದ್ದರು. ‘ನಾಮಿನೇಟ್ ಆದ ಮಾತ್ರಕ್ಕೆ ನೀವು ಹೊರ ಹೋಗಲ್ಲ. ನೀವು ಉಳಿದುಕೊಳ್ಳುತ್ತಿರಿ’ ಎಂದು ಮಾನಸಾಗೆ ಹೇಳಿದ್ದರು ಹನುಮಂತ. ಆದರೆ, ಮಾನಸಾ ಎಲಿಮಿನೇಟ್ ಆದರು. ಈಗ ಧನರಾಜ್​ಗೂ ಹನುಮಂತ ಇದೇ ಮಾತನ್ನು ಹೇಳಿದ್ದು, ಅವರಿಗೆ ಭಯ ಶುರುವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.