‘ಜಿಮ್ ಮಾಡಿದ್ರೆ ಸತ್ತಮೇಲೆ ಬೇರೆ ಕಡೆ ಸುಡ್ತಾರಾ’; ಹನುಮಂತನ ನೀತಿ ಪಾಠ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಪಡೆದರು. ಅವರು ಬಂದ ದಿನದಿಂದಲೂ ಚಿಲ್ ಆಗಿ ಇದ್ದಾರೆ. ಯಾವ ವಿಚಾರಕ್ಕೂ ಅವರು ಹೆಚ್ಚು ತೆಲಕೆಡಿಸಿಕೊಳ್ಳುತ್ತಿಲ್ಲ. ನವೆಂಬರ್ 5ರ ಎಪಿಸೋಡ್​ನಲ್ಲಿ ಅವರು ಒಂದು ಗಂಭೀರ ವಿಚಾರವನ್ನು ಹೇಳಿದ್ದಾರೆ.

‘ಜಿಮ್ ಮಾಡಿದ್ರೆ ಸತ್ತಮೇಲೆ ಬೇರೆ ಕಡೆ ಸುಡ್ತಾರಾ’; ಹನುಮಂತನ ನೀತಿ ಪಾಠ
ಹನುಮಂತ್
Follow us
ರಾಜೇಶ್ ದುಗ್ಗುಮನೆ
|

Updated on:Nov 06, 2024 | 6:56 AM

ಹನುಮಂತ ಅವರು ಬಿಗ್ ಬಾಸ್​​ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರು ಅನೇಕರ ಮೆಚ್ಚುಗೆ ಪಡೆದಿದ್ದಾರೆ. ಹನುಮಂತ ಯಾವ ವಿಚಾರಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಹೇಳುವ ಜೀವನ ಪಾಠ ಅನೇಕರಿಗೆ ಇಷ್ಟ ಆಗುತ್ತದೆ. ಈಗ ಹನುಮಂತ ಅವರು ಹೇಳಿದ ಒಂದು ಮಾತಿಗೆ ಅವರ ಗೆಳೆಯ ಧನರಾಜ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಪಡೆದರು. ಅವರು ಬಂದ ದಿನದಿಂದಲೂ ಚಿಲ್ ಆಗಿ ಇದ್ದಾರೆ. ಯಾವ ವಿಚಾರಕ್ಕೂ ಅವರು ಹೆಚ್ಚು ತೆಲಕೆಡಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ನವೆಂಬರ್ 5ರ ಎಪಿಸೋಡ್​ನಲ್ಲಿ ಅವರು ಒಂದು ಗಂಭೀರ ವಿಚಾರವನ್ನು ಹೇಳಿದ್ದಾರೆ.

ಧನರಾಜ್​ ಅವರು ಗಾರ್ಡನ್ ಏರಿಯಾದಲ್ಲಿ ಜಿಮ್ ಮಾಡುತ್ತಿದ್ದರು. ‘ಏಕೆ ವ್ಯಾಯಾಮ ಮಾಡುತ್ತಿದ್ದೀಯಾ’ ಎಂದು ಹನುಮಂತ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಧನರಾಜ್ ಅವರು, ‘ಹೊಟ್ಟೆ ಕರಗಿಸಬೇಕು. ಹೊಟ್ಟೆ ಫ್ಲ್ಯಾಟ್ ಆಗಿ ಕಾಣಬೇಕು. ಬೇಗ ಬೇಗ ಮಾಡಿ ಬರ್ತೀನಿ’ ಎಂದರು. ಇದನ್ನು ಕೇಳಿ ಹನುಮಂತ್ ಅವರು ತಮ್ಮದೇ ಸ್ಟೈಲ್​ನಲ್ಲಿ ಉತ್ತರ ಕೊಟ್ಟರು.

‘ಒಂದಿನ ಸತ್ತರೆ ಎಲ್ಲರೂ ಅಲ್ಲೇ ಹೋಗೋದು. ಜಿಮ್ ಮಾಡಿದಾನೆ, ಹೊಟ್ಟೆ ಕರಗಿಸಿದ್ದಾನೆ ಎಂದು ಬೇರೆ ಕಡೆ ಸುಡ್ತಾರಾ? ಹೀಗೂ ಆಲೋಚನೆ ಮಾಡಬೇಕು’ ಎಂದರು ಹನುಮಂತ. ಈ ಮಾತನ್ನು ಕೇಳಿ ಧನರಾಜ್​ ನಕ್ಕರು. ಅವರಿಗೂ ಈ ಮಾತು ಹೌದೆನ್ನಿಸಿದೆ.

ಇದನ್ನೂ ಓದಿ: ಹನುಮಂತನ ಕ್ಯಾಪ್ಟೆನ್ಸಿಯಲ್ಲಿ ಮತ್ತೆ ರಣರಂಗ ಆಗುತ್ತಿದೆ ಬಿಗ್ ಬಾಸ್ ಮನೆ

ಹನುಮಂತ ಅವರು ಬಂದ ಬಳಿಕ ಹಂಗಾಮಿ ಕ್ಯಾಪ್ಟನ್ ಆದರು. ಆ ಬಳಿಕ ಅವರು ಕ್ಯಾಪ್ಟನ್ ಆದರು. ಈಗ ಟಾಸ್ಕ್ ಉಸ್ತುವಾರಿ ಅವರದ್ದೇ. ಈ ಕಾರಣಕ್ಕೆ ಅವರು ಸಾಕಷ್ಟು ಚರ್ಚೆ ಆಗುತ್ತಿದ್ದಾರೆ. ಅವರ ನಿರ್ಧಾರಗಳಿಂದ ಇಡೀ ಮನೆ ಹೊತ್ತಿ ಉರಿಯುತ್ತಿದೆ. ಹನಮಂತ ಅವರು ಮುಗ್ಧನಾಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರದ್ದು ನಿಜವಾದ ಮುಗ್ಧತೆ ಅಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Wed, 6 November 24