ಧನರಾಜ್, ಹನುಮಂತ ಫ್ರೇಮ್​ನಲ್ಲಿ ಇದ್ದರೆ ಬಿಗ್ ಬಾಸ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ

ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಗೆ ಬಂದ ಹನುಮಂತ ಅವರು ಧನರಾಜ್ ಜೊತೆ ಸ್ನೇಹ ಬೆಳೆಸಿದ್ದಾರೆ. ಧನರಾಜ್ ಮತ್ತು ಹನುಮಂತ ಒಟ್ಟಿಗೆ ಸೇರಿದರೆ ಅಲ್ಲಿ ಸಖತ್ ಕಾಮಿಡಿ ಇರುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಕಾರ್ಯಕ್ರಮವನ್ನು ವೀಕ್ಷಿಸುವ ಪ್ರೇಕ್ಷಕರು ಈ ಜೋಡಿಯನ್ನು ಇಷ್ಟಪಡುತ್ತಿದ್ದಾರೆ. ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆದರೂ ಕಾಮಿಡಿ ಕಿಕ್ ಮಿಸ್ ಆಗಲಿದೆ.

ಧನರಾಜ್, ಹನುಮಂತ ಫ್ರೇಮ್​ನಲ್ಲಿ ಇದ್ದರೆ ಬಿಗ್ ಬಾಸ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ
ಧನರಾಜ್, ಹನುಮಂತ
Follow us
ಮದನ್​ ಕುಮಾರ್​
|

Updated on: Nov 06, 2024 | 10:17 PM

ಹನುಮಂತ್ ಸಿಂಗರ್ ಆಗಿದ್ದರೂ ಕೂಡ ಅವರು ಕಾಮಿಡಿ ಮೂಲಕ ಗಮನ ಸೆಳೆಯುತ್ತಿದ್ದಾರೆ. ಯಾವ ಕಾಮಿಡಿ ನಟನಿಗೂ ಕಡಿಮೆ ಇಲ್ಲದ ಹಾಗೆ ಅವರು ಎಲ್ಲರನ್ನೂ ನಗಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹನುಮಂತ ನೇರವಾಗಿ ಮಾತನಾಡುತ್ತಾರೆ. ಪೇಟೆ ಜನರ ರೀತಿ-ನೀತಿ ಬಗ್ಗೆ ಹೆಚ್ಚೇನೂ ತಿಳಿದಿರದ ಹನುಮಂತ ಅವರ ನಡೆ-ನುಡಿ ನೇರವಾಗಿದೆ. ಹಾಗಾಗಿ ಅವರ ಸ್ವಭಾವ ಅನೇಕರಿಗೆ ಇಷ್ಟ ಆಗುತ್ತಿದೆ. ಯಾವುದೇ ಸ್ಪರ್ಧಿಯ ಜೊತೆ ಹನುಮಂತ ಅವರು ಗಂಭೀರವಾಗಿ ದ್ವೇಷ ಕಟ್ಟಿಕೊಂಡಿಲ್ಲ. ಧನರಾಜ್ ಜೊತೆ ಅವರು ಹೆಚ್ಚು ಆಪ್ತವಾಗಿದ್ದಾರೆ.

ಸಾಧ್ಯವಾದಷ್ಟು ಹೊತ್ತು ಧನರಾಜ್ ಮತ್ತು ಹನುಮಂತ ಅವರು ಜೊತೆಯಾಗಿ ಕಾಲ ಕಳೆಯುತ್ತಾರೆ. ಅವರಿಬ್ಬರ ನಡುವಿನ ಮಾತುಕತೆ ಯಾವಾಗಲೂ ಫನ್ನಿ ಆಗಿರುತ್ತದೆ. ಧನರಾಜ್ ಅವರು ಯೂಟ್ಯೂಬ್​ನಲ್ಲಿ ಕಾಮಿಡಿ ವಿಡಿಯೋಗಳ ಮೂಲಕ ಫೇಮಸ್ ಆಗಿದ್ದರು. ಅವರ ಶಕ್ತಿಯೇ ಕಾಮಿಡಿ. ಅಂಥವರ ಜೊತೆ ಹನುಮಂತ ಕೈ ಜೋಡಿಸಿರುವುದರಿಂದ ಕಾಮಿಡಿ ಜಾಸ್ತಿ ಆಗಿದೆ.

ಹನುಮಂತ ಅವರು ಉತ್ತರ ಕರ್ನಾಟಕದವರು. ಧನರಾಜ್ ಅವರು ಕರಾವಳಿ ಭಾಗದವರು. ಇಬ್ಬರ ಭಾಷೆಯ ಶೈಲಿ ಬೇರೆ ಬೇರೆ ರೀತಿ ಇದೆ. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಸ್ನೇಹ ಬೆಳೆದಿದೆ. ಹನುಮಂತ ಹೇಳಿಕೊಡುವ ಹಾಡುಗಳನ್ನು ಕೇಳಲು ಧನರಾಜ್ ಅವರು ಪ್ರಯತ್ನಿಸುತ್ತಿದ್ದಾರೆ. ಹನುಮಂತನ ಮಾತುಗಳಿಗೆ ಧನರಾಜ್ ಕೂಡ ಬಿದ್ದು ಬಿದ್ದು ನಗುತ್ತಾರೆ. ಧನರಾಜ್ ಅವರನ್ನು ಹನುಮಂತ ಅವರು ಹುಲಿ ಅಂತ ಕರೆಯುತ್ತಾರೆ.

ಇದನ್ನೂ ಓದಿ: ಬಣ್ಣ ಬಣ್ಣದ ಸುಳ್ಳು ಹೇಳಿದ ಸುರೇಶ್; ಆದ್ರೆ ಹನುಮಂತನ ಮುಂದೆ ನಡೆಯಲಿಲ್ಲ ಆಟ

ಎಷ್ಟೇ ಕ್ಲೋಸ್ ಆಗಿದ್ದರೂ ಕೂಡ ಹನುಮಂತ ಅವರು ನಾಮಿನೇಷನ್ ವಿಚಾರದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಧನರಾಜ್ ಅವರನ್ನು ಕೂಡ ಹನುಮಂತ ನಾಮಿನೇಟ್ ಮಾಡುತ್ತಾರೆ. ಎರಡು ಬಾರಿ ಹನುಮಂತ ಕ್ಯಾಪ್ಟನ್ ಆಗಿದ್ದಾರೆ. ಆದರೆ ಎರಡನೇ ವಾರಕ್ಕೆ ಅವರಿಗೆ ಕ್ಯಾಪ್ಟನ್ ಪಟ್ಟ ಬೇಜಾರು ತರಿಸಿದೆ. ‘ಇನ್ನುಳಿದ ದಿನಗಳಿಗೆ ನನ್ನ ಬದಲು ನಮ್ಮ ಹುಲಿಗೆ ಕ್ಯಾಪ್ಟನ್ ಪಟ್ಟ ಕೊಡಿ’ ಎಂದು ಹನುಮಂತ ಹೇಳಿದ್ದಾರೆ. ಅವರ ಮಾತು ಕೇಳಿ ತ್ರಿವಿಕ್ರಮ್ ನಕ್ಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ