ಬಣ್ಣ ಬಣ್ಣದ ಸುಳ್ಳು ಹೇಳಿದ ಸುರೇಶ್; ಆದ್ರೆ ಹನುಮಂತನ ಮುಂದೆ ನಡೆಯಲಿಲ್ಲ ಆಟ
ಬಿಗ್ ಬಾಸ್ ಮನೆಯಲ್ಲಿ ಸಿಂಗರ್ ಹನುಮಂತ ಅವರು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಮುಲಾಜು ಇಲ್ಲದೇ ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಿದ್ದಾರೆ. ಆಪ್ತವಾಗಿ ಇರುವವರನ್ನು ಕೂಡ ಅವರು ನಿಷ್ಠುರವಾಗಿ ನಾಮಿನೇಟ್ ಮಾಡುತ್ತಿದ್ದಾರೆ. ಅದೇ ರೀತಿ, ಕಾಮಿಡಿ ಮಾಡುವುದರಲ್ಲೂ ಅವರು ಹಿಂದೆ ಬಿದ್ದಿಲ್ಲ.
ಗೋಲ್ಡ್ ಸುರೇಶ್ ಅವರು ಮೋಡದಿಂದ ಪಲ್ಯ ಮಾಡಬಹುದು ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಮೋಕ್ಷಿತಾ, ಐಶ್ವರ್ಯಾ, ಧನರಾಜ್, ಹನುಮಂತ ಅವರಿಗೆ ಅಚ್ಚರಿ ಆಗಿದೆ. ಗೋಲ್ಡ್ ಸುರೇಶ್ ಹೇಳಿದ್ದು ಸುಳ್ಳು ಎಂದು ಹನುಮಂತ ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕೂಡಲೇ ತಿರುಗೇಟು ನೀಡಿದ್ದಾರೆ. ಮುಗ್ಧನಂತೆ ಕಂಡರೂ ಕೂಡ ಹನುಮಂತನ ಮುಂದೆ ಇಂಥ ಆಟ ನಡೆಯೋದಿಲ್ಲ ಎಂಬುದು ಗೋಲ್ಡ್ ಸುರೇಶ್ ಅವರಿಗೆ ಅರ್ಥ ಆದಂತಿದೆ. ಈ ಸಂಚಿಕೆ ನ.6ರಂದು ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos