ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 2,000 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ್ದು: ಡಿಕೆ ಶಿವಕುಮಾರ
ತಾವು ಸಚಿವನಾಗಿದ್ದಾಗಲೇ ಅಂತರರಾಷ್ಷ್ರೀಯ ವಿಮಾನದ ನಿಲ್ದಾಣಕ್ಕೆ 2,000 ಎಕರೆ ಸರ್ಕಾರೀ ಜಮೀನು ಮತ್ತು 2,200 ಎಕರೆ ಜಮೀನನ್ನು ರೈತರಿಂದ ಪಡೆದು ಪ್ರಾಧಿಕಾರಕ್ಕೆ ನೀಡಿದ್ದು ಎಂದು ಶಿವಕುಮಾರ ಹೇಳಿದರು.
ಬೆಂಗಳೂರು: ಶುಕ್ರವಾರದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜೆಡಿ(ಎಸ್) ಹಾಗೂ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸದ ಬಿಜೆಪಿ ಸರ್ಕಾರದ ನಡೆದ ತೀವ್ರ ಟೀಕೆಗೊಳಗಾಗುತ್ತಿದೆ. ಬೆಂಗಳೂರಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ (DK Shivakumar) ಅವರು ಬಿಜೆಪಿಗೆ ಸೌಜನ್ಯತೆ, ಸಂಸ್ಕಾರ, ಶಿಷ್ಟಾಚಾರ-ಯಾವುದೂ ಗೊತ್ತಿಲ್ಲ ಎಂದರು. ತಾವು ನಗರಾಭಿವೃದ್ಧಿ (urban development) ಖಾತೆ ಸಚಿವನಾಗಿದ್ದಾಗಲೇ ಅಂತರರಾಷ್ಷ್ರೀಯ ವಿಮಾನದ ನಿಲ್ದಾಣಕ್ಕೆ 2,000 ಎಕರೆ ಸರ್ಕಾರೀ ಜಮೀನು ಮತ್ತು 2,200 ಎಕರೆ ಜಮೀನನ್ನು ರೈತರಿಂದ ಪಡೆದು ಪ್ರಾಧಿಕಾರಕ್ಕೆ ನೀಡಿದ್ದು ಎಂದು ಶಿವಕುಮಾರ ಹೇಳಿದರು.