ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಗುಜರಾತ್​​​

|

Updated on: Jan 01, 2024 | 1:19 PM

ರಾಜ್ಯದ 108 ಐತಿಹಾಸಿಕ ಸ್ಥಳಗಳ ಪೈಕಿ 51 ಸ್ಥಳಗಳಲ್ಲಿ ಸೂರ್ಯ ನಮಸ್ಕಾರ ಮಾಡಲಾಗಿದೆ. ಪ್ರಥಮ ಬಾರಿಗೆ 18 ಸಾವಿರ ಗ್ರಾಮಗಳಲ್ಲಿ 15 ಲಕ್ಷ ಜನರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಲಿದೆ. ಈ ಕಾರ್ಯಕ್ರಮದಲ್ಲಿ ಗುಜರಾತ್​​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಭಾಗವಹಿಸಿದರು.

ಗಾಂಧಿನಗರ, ಜ.1: 2024ರ ಆರಂಭದ ಮೊದಲ ದಿನವೇ ಸೂರ್ಯಗೆ ನಮಸ್ಕಾರ (SuryaNamaskar) ಮಾಡುವ ಮೂಲಕ ವಿಶ್ವ ದಾಖಲೆಯನ್ನು ಗುಜರಾತ್ (Gujarat)​​​​ ರಾಜ್ಯ ನಿರ್ಮಿಸಿದೆ. ರಾಜ್ಯದ 108 ಐತಿಹಾಸಿಕ ಸ್ಥಳಗಳ ಪೈಕಿ 51 ಸ್ಥಳಗಳಲ್ಲಿ ಸೂರ್ಯ ನಮಸ್ಕಾರ ಮಾಡಲಾಗಿದೆ. ಪ್ರಥಮ ಬಾರಿಗೆ 18 ಸಾವಿರ ಗ್ರಾಮಗಳಲ್ಲಿ 15 ಲಕ್ಷ ಜನರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಲಿದೆ. ಈ ಕಾರ್ಯಕ್ರಮದಲ್ಲಿ ಗುಜರಾತ್​​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (CM Bhupendra Patel) ಕೂಡ ಭಾಗವಹಿಸಿದರು. ಈ ಬಗ್ಗೆ ಮಾತನಾಡಿದ ಅವರು ಮೊಧೇರಾ ಸೂರ್ಯ ಮಂದಿರದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಹಮ್ಮಿಕೊಳ್ಳಲಾಗಿದೆ. ಇದಲ್ಲದೇ ಶರ್ಮಿಷ್ಠ ಸರೋವರ ಹಾಗೂ ಹಟಕೇಶ್ವರ ದೇವಸ್ಥಾನದಲ್ಲೂ ಕೂಡ ಸೂರ್ಯ ನಮಸ್ಕಾರ ಮಾಡಲಾಗಿದೆ. ಹೊಸ ವರ್ಷದ ಆರಂಭದಲ್ಲೇ ದೇಶದ ಮೊದಲ ವಿಶ್ವ ದಾಖಲೆಯನ್ನು ಗುಜರಾತ್ ಮಾಡಿದೆ. ಭಾರತ ಯೋಗ ಪದ್ಧತಿಯಲ್ಲಿ ಸೂರ್ಯ ನಮಸ್ಕಾರ ಉತ್ತಮ ಎಂದು ಹೇಳಿಕೊಂಡಿದೆ. ಇದು ಆಧ್ಯಾತ್ಮಿಕತೆ ಮೂಲಗಳು ಹೌದು. ಮೊಧೇರಾ ಸೌರ ಗ್ರಾಮವಾಗಿ ನಿರ್ಮಿಸಲಾದ ದೇಶದ ಮೊದಲ ಗ್ರಾಮವಾಗಿದೆ ಎಂದು ಹೇಳಿದ್ದಾರೆ.