Video: ತಲೆಗೆ ಹೆಲ್ಮೆಟ್​, ಮೈಗೆ ಸೇಫ್ಟಿ ಜಾಕೆಟ್​, ಕಾರ್ಮಿಕರ ಜತೆ ನೆಲದಲ್ಲಿ ಕುಳಿತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಗುಜರಾತ್‌ನ ಮೊದಲ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಯನ್ನು ವೀಕ್ಷಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತೆರಳಿದ್ದರು. ಅಲ್ಲಿ ತಲೆಗೆ ಹೆಲ್ಮೆಟ್, ಮೈಗೆ ಸೇಫ್ಟಿ ಜಾಕೆಟ್ ಧರಿಸಿ ಕಾರ್ಮಿಕರ ಜತೆ ಕೆಳಗೆ ಕುಳಿತುಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ. ಅಹಮದಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಶನಿವಾರ ಗುಜರಾತ್‌ಗೆ ಆಗಮಿಸಿದ ರೈಲ್ವೆ ಸಚಿವರು, ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿಲೋಮೀಟರ್ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.

ಅಹಮದಾಬಾದ್, ಮಾರ್ಚ್​ 1: ಗುಜರಾತ್‌ನ ಮೊದಲ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಯನ್ನು ವೀಕ್ಷಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತೆರಳಿದ್ದರು. ಅಲ್ಲಿ ತಲೆಗೆ ಹೆಲ್ಮೆಟ್, ಮೈಗೆ ಸೇಫ್ಟಿ ಜಾಕೆಟ್ ಧರಿಸಿ ಕಾರ್ಮಿಕರ ಜತೆ ಕೆಳಗೆ ಕುಳಿತುಕೊಂಡು ಫೋಟೊಗೆ ಪೋಸ್ ನೀಡಿದ್ದಾರೆ. ಅಹಮದಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಶನಿವಾರ ಗುಜರಾತ್‌ಗೆ ಆಗಮಿಸಿದ ರೈಲ್ವೆ ಸಚಿವರು, ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿಲೋಮೀಟರ್ ಕೆಲಸ ಪೂರ್ಣಗೊಂಡಿದೆ ಎಂದು ಹೇಳಿದರು.

ಬುಲೆಟ್ ರೈಲು ಕಾಮಗಾರಿಯ ಸುಮಾರು 360 ಕಿ.ಮೀ. ಪೂರ್ಣಗೊಂಡಿದ್ದು, (ಉದ್ಧವ್) ಠಾಕ್ರೆ ಅನುಮತಿ ನಿರಾಕರಿಸಿದ್ದರಿಂದ ನಾವು ಕಳೆದುಕೊಂಡ ಎರಡೂವರೆ ವರ್ಷಗಳನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ವೈಷ್ಣವ್ ಹೇಳಿದರು. ಅಹಮದಾಬಾದ್-ಮುಂಬೈ ಬುಲೆಟ್ ರೈಲು ಕಾರಿಡಾರ್‌ನ ಒಟ್ಟು ಉದ್ದ 508 ಕಿ.ಮೀ.ದ್ದಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ