Drunkard’s take: ಯಡಿಯೂರಪ್ಪ-ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದಲ್ಲಿ ಎಣ್ಣೆ ಆಗ್ಗವಾಗಿತ್ತು, ಸಿದ್ದರಾಮಯ್ಯ ತಪ್ಪು ಮಾಡ್ತಿದ್ದಾರೆ! ಎಣ್ಣೆಪ್ರಿಯ ಚಂದ್ರೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Jun 10, 2023 | 3:03 PM

ಮಹಿಳೆಯರು ಬಸ್ಸಲ್ಲಿ ತಿರುಗಾಡುವುದು ಕಮ್ಮಿ, ಪುರುಷರು ಜಾಸ್ತಿ ತಿರುಗಾಡುವುರಿಂದ ಅವರಿಗೆ ಈ ಸೌಲಭ್ಯ ನೀಡಬೇಕಿತ್ತು ಅನ್ನೋದು ಗೌಡರ ವಾದ!

ಬೆಂಗಳೂರು: ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಅಂತ ಮೂರೂವರೆ ದಶಕಗಳ ಹಿಂದೆ ಮಾಲಾಶ್ರೀ ಹಾಡಿದರು, ಆದರೆ ಗುಂಡನ್ನು ಹೊಟ್ಟೆಗಿಳಿಸಿದ ಗಂಡು ಏನಾಗುತ್ತಾನೆ? ಮಂಡ್ಯದ ಚಂದ್ರೇಗೌಡ (Chandregowda) ಆಗುತ್ತಾನೆ! ನಗರದ ವೈನ್ ಶಾಪೊಂದರಲ್ಲಿ ಎಣ್ಣೆ ಹೊಡೆದು ಕಿಕ್ ತಲೆಗೇರಿಸಿಕೊಂಡ ಚಂದ್ರೇಗೌಡ ಹೇಳುವ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ ತಪ್ಪು ಮಾಡಿದ್ದಾರೆ! ಮಹಿಳೆಯರು ಬಸ್ಸಲ್ಲಿ ತಿರುಗಾಡುವುದು ಕಮ್ಮಿ, ಪುರುಷರು ಜಾಸ್ತಿ ತಿರುಗಾಡುವುರಿಂದ ಅವರಿಗೆ ಈ ಸೌಲಭ್ಯ ನೀಡಬೇಕಿತ್ತು ಅನ್ನೋದು ಗೌಡರ ವಾದ! ರಾಜ್ಯದಲ್ಲಿ ಮದ್ಯದ ಮೇಲೆ ತೆರಿಗೆ ಹೆಚ್ಚಿಸುವ ಯೋಚನೆ ಸರ್ಕಾರ ಮಾಡುತ್ತಿರುವುದು ಗೌಡರಿಗೆ ಕಿರಿಕಿರಿ ಉಂಟುಮಾಡಿದೆ. ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಸರ್ಕಾರ ಅಧಿಕಾರದಲ್ಲಿದ್ದಾಗ, ಲಿಕ್ಕರ್ ಬಹಳ ಅಗ್ಗ ದರದಲ್ಲಿ ಸಿಗುತಿತ್ತು, ಅ ಸರ್ಕಾರವೇ ಚೆನ್ನಾಗಿತ್ತು, ಸಿದ್ದರಾಮಯ್ಯ ತಪ್ಪು ಮಾಡುತ್ತಿದ್ದಾರೆ ಎಂದು ಚಂದ್ರೇಗೌಡರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.