ಒಂದೇ ವಾರದಲ್ಲಿ 2 ಫೈನಲ್ ಸೋಲು..!
ವಿಟಾಲಿಟಿ ಟಿ20 ಬ್ಲಾಸ್ಟ್ ಫೈನಲ್ ಪಂದ್ಯದಲ್ಲಿ ಹ್ಯಾಂಪ್ಶೈರ್ ತಂಡವು ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್ಶೈರ್ 20 ಓವರ್ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು 19 ಓವರ್ಗಳಲ್ಲಿ ಚೇಸ್ ಮಾಡಿ ಸೋಮರ್ಸೆಟ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಒಂದೇ ವಾರದಲ್ಲಿ ಎರಡು ಆಘಾತ… ಹೀಗೆ ವಾರದೊಳಗೆ ಎರಡು ಫೈನಲ್ ಸೋಲಿನ ಆಘಾತ ಎದುರಿಸಿದ್ದು ಹ್ಯಾಂಪ್ಶೈರ್ ತಂಡ. ಸೆಪ್ಟೆಂಬರ್ 13 ರಂದು ವಿಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದ ಹ್ಯಾಂಪ್ಶೈರ್ ಪಡೆ ಇದೀಗ ರಾಯಲ್ ಲಂಡನ್ ಒನ್ಡೇ ಕಪ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿದೆ.
ಇಂಗ್ಲೆಂಡ್ನ ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ಬ್ರಿಡ್ಜ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಒನ್ಡೇ ಕಪ್ ಫೈನಲ್ ಪಂದ್ಯದಲ್ಲಿ ಹ್ಯಾಂಪ್ಶೈರ್ ಹಾಗೂ ವೋರ್ಸೆಸ್ಟರ್‌ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್ಶೈರ್ 45 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 237 ರನ್ ಕಲೆಹಾಕಿದ್ದರು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ವೋರ್ಸೆಸ್ಟರ್‌ಶೈರ್ ತಂಡಕ್ಕೆ 27 ಓವರ್ಗಳಲ್ಲಿ 188 ರನ್ಗಳ ಗುರಿ ನೀಡಲಾಯಿತು. ಈ ಗುರಿಯನ್ನು 26.4 ಓವರ್ಗಳಲ್ಲಿ ಚೇಸ್ ಮಾಡಿ ವೋರ್ಸೆಸ್ಟರ್‌ಶೈರ್ ತಂಡವು 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್ನ ರಾಯಲ್ ಒನ್ಡೇ ಕಪ್ನ ನೂತನ ಚಾಂಪಿಯನ್ ಆಗಿ ವೋರ್ಸೆಸ್ಟರ್‌ಶೈರ್ ತಂಡ ಹೊರಹೊಮ್ಮಿದೆ.
ಇದಕ್ಕೂ ಮುನ್ನ, ಕಳೆದ ವಾರ ನಡೆದ ವಿಟಾಲಿಟಿ ಟಿ20 ಬ್ಲಾಸ್ಟ್ ಫೈನಲ್ ಪಂದ್ಯದಲ್ಲಿ ಹ್ಯಾಂಪ್ಶೈರ್ ತಂಡವು ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹ್ಯಾಂಪ್ಶೈರ್ 20 ಓವರ್ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು 19 ಓವರ್ಗಳಲ್ಲಿ ಚೇಸ್ ಮಾಡಿ ಸೋಮರ್ಸೆಟ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಒನ್ಡೇ ಕಪ್ ಫೈನಲ್ನಲ್ಲೂ ಸೋಲುವ ಮೂಲಕ ಹ್ಯಾಂಪ್ಶೈರ್ ಪಡೆ ಭಾರೀ ನಿರಾಸೆ ಅನುಭವಿಸಿದೆ.
