ಯಾರನ್ನು ಸಂಭಾಳಿಸುವುದು ಸುಲಭ ಪ್ರೇಯಸಿಯನ್ನಾ? ಪತ್ನಿಯನ್ನಾ? ಅಭಿಷೇಕ್ ಕೊಟ್ಟರು ಜಾಣ ಉತ್ತರ

|

Updated on: Jun 17, 2023 | 8:37 AM

Abhi-Aviva: ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಿರುವ ಅಭಿಷೇಕ್​ಗೆ, ಪ್ರೇಯಸಿಯನ್ನು ಸಂಭಾಳಿಸುವುದು ಸುಲಭವಾ ಅಥವಾ ಪತ್ನಿಯನ್ನಾ ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಣ ಉತ್ತರ ನೀಡಿದ್ದಾರೆ ಮರಿ ಮಂಡ್ಯದ ಗಂಡು.

ಅಭಿಷೇಕ್ ಅಂಬರೀಶ್ (Abhishek Ambareesh) ಪ್ರೀತಿಸಿದ್ದ ಅವಿವಾ ಬಿದಪ್ಪ (Aviva Bidappa) ಅವರನ್ನೇ ವಿವಾಹವಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಇಬ್ಬರ ಮದುವೆ ನಡೆದಿದೆ. ನಿನ್ನೆ (ಜೂನ್ 16) ಮಂಡ್ಯದ ಮದ್ದೂರಿನ ಗೆಜ್ಜೆಲೆಗೆರೆಯಲ್ಲಿ ಮಂಡ್ಯ ಜನತೆಗೆ ಭರ್ಜರಿ ಬಾಡೂಟದ ಔತಣಕೂಟ ಸಹ ನೀಡಿದ್ದಾರೆ. ಅದೇ ದಿನ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಭಿಷೇಕ್​ಗೆ ಮಾಜಿ ಪ್ರೇಯಸಿ, ಹಾಲಿ ಪತ್ನಿ ಅವಿವಾ ಬಗ್ಗೆ ಪ್ರಶ್ನೆಗಳು ಎದುರಾಗಿದ್ದು, ಪ್ರೇಯಸಿಯನ್ನು ಸಂಭಾಳಿಸುವುದು ಸುಲಭವಾ? ಪತ್ನಿಯನ್ನು ಸಂಭಾಳಿಸುವುದು ಸುಲಭವಾ? ಎಂಬ ತರ್ಲೆ ಪ್ರಶ್ನೆ ಎದುರಾಗಿದ್ದು ಅದಕ್ಕೆ ಜಾಣ ಉತ್ತರವನ್ನು ಮರಿ ಮಂಡ್ಯದ ಗಂಡು ನೀಡಿದ್ದಾರೆ. ವಿಡಿಯೋ ನೋಡಿ ಉತ್ತರ ತಿಳಿಯಿರಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ