‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’: ಮೈಲಾರಲಿಂಗನ ಈ ಕಾರ್ಣಿಕದ ಅರ್ಥವೇನು?

Updated on: Feb 01, 2026 | 9:39 PM

ಭರತ್ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹರಪನಹಳ್ಳಿ ದೊಡ್ಡ ಮೈಲಾರ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹೊರಬಿದ್ದಿದ್ದು, "ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದಾನೆ. ಇನ್ನು ಈ ಕಾರ್ಣಿಕ ಬಗ್ಗೆ ಭಕ್ತರಲ್ಲಿ ನಾನಾ ರೀತಿಯ ಅಂದರೆ ಅಂಬಲಿ ರಾಶಿ ಅಂದ್ರೆ ಸಮೃದ್ಧ ಬೆಳೆ. ಈ ವರ್ಷ ಮಳೆ ಬೆಳೆ ಚನ್ನಾಗಿ ಆಗುತ್ತದೆ. ಒಳ್ಳೆಯ ಸಮೃದ್ಧ ವರ್ಷ ಆಗುತ್ತದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ವಿಜಯನಗರ, (ಫೆಬ್ರವರಿ 01):  ಭರತ್ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಹರಪನಹಳ್ಳಿy ದೊಡ್ಡ ಮೈಲಾರ ಮೈಲಾರ ಲಿಂಗೇಶ್ವರನ ಈ ವರ್ಷದ ಕಾರ್ಣಿಕ ಹೊರಬಿದ್ದಿದ್ದು, “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂದು ಗೊರವಪ್ಪ ನುಡಿದಿದ್ದಾನೆ. ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ ಶೂನ್ಯವನ್ನು ದಿಟ್ಟಿಸಿ ನೋಡುತ್ತಾ, ಈ ವರ್ಷದ ಕಾರಣಿಕ ನುಡಿದರು. ಈ ವರ್ಷ ಗೊರವಯ್ಯ “ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್’ ಎಂಬ ಕಾರಣಿಕ ಹೇಳಿದ್ದಾರೆ. ಈ ಕಾರಣಿಕವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಹಲವು ವರ್ಷಗಳಿಂದ ಭರತ ಹುಣ್ಣಿಮೆಯಂದು ಕಾರಣಿಕ ನುಡಿಯುವ ಸಂಪ್ರದಾಯ ಇಲ್ಲಿದೆ. ಇಲ್ಲಿಯ ಕಾರಣಿಕದ ನಂತರ ಮೈಲಾರದಲ್ಲಿ ಕಾರಣಿಕವಾಗುತ್ತದೆ. ‘ಈ ಬಾರಿ ಮಳೆಬೆಳೆಯಾಗಿ ರಾಜ್ಯದ ಜನರು ಸುಖದಿಂದ ಇರುತ್ತಾರೆ’ ಎಂದು ಹಲವಾರು ಜನರು ಕಾರಣಿಕವನ್ನು ವಿವರಿಸಿದ್ದಾರೆ. ಇಲ್ಲಿನ ಕಾರಣಿಕ ಸತ್ಯವಾಗುತ್ತದೆ ಎಂದು ಜನರು ನಂಬುತ್ತಾರೆ.

Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More