Sari politics in Hassan: ಹಾಸನ ಬಿಜೆಪಿ ಶಾಸಕ ಪ್ರೀತಂಗೌಡರಿಂದಲೂ ಅಷ್ಟಲಕ್ಷ್ಮಿ ಪೂಜೆ ನೆಪದಲ್ಲಿ ಮಹಿಳೆಯರಿಗೆ ಸೀರೆ ಹಂಚಿಕೆ!

|

Updated on: Mar 08, 2023 | 11:30 AM

ಹಾಸನದ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಸಹ ತಮ್ಮ ಕ್ಷೇತ್ರದ ಎಲ್ಲ ಪಂಚಾಯತಿ ಮತ್ತು ವಾರ್ಡ್ಗಳಲ್ಲಿ ಅಷ್ಟಲಕ್ಷ್ಮಿ ಪೂಜೆ ಏರ್ಪಡಿಸಿ ಅದೇ ನೆಪದಲ್ಲಿ ಮಹಿಳೆಯರಿಗೆ ಸೀರೆ ಮತ್ತು ಬೆಳ್ಳಿಯಲ್ಲಿ ತಯಾರಿಸಿದ ದೇವರ ವಿಗ್ರಹಗಳನ್ನು ಹಂಚುತ್ತಿದ್ದಾರೆ.

ಹಾಸನ: ರಾಜ್ಯದಲ್ಲಿ ಸೀರೆ ರಾಜಕಾರಣ ಜೋರಾಗಿ ಮುಂದುವರಿದಿದೆ. ಚಿಕ್ಕಮಗಳೂರು ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಬಿಜೆಪಿ ಶಾಸಕ ಸಿಟಿ ರವಿ (CT Ravi) ಉಡುಗೊರೆಯಾಗಿ ನೀಡಿದ ಸೀರೆಗಳನ್ನು ಮತದಾರರು ಸುಟ್ಟುಹಾಕಿದ್ದನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಹಾಸನದ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ (Preetham J Gowda) ಸಹ ತಮ್ಮ ಕ್ಷೇತ್ರದ ಎಲ್ಲ ಪಂಚಾಯತಿ ಮತ್ತು ವಾರ್ಡ್ಗಳಲ್ಲಿ ಅಷ್ಟಲಕ್ಷ್ಮಿ ಪೂಜೆ ಏರ್ಪಡಿಸಿ ಅದೇ ನೆಪದಲ್ಲಿ ಮಹಿಳೆಯರಿಗೆ ಸೀರೆ ಮತ್ತು ಬೆಳ್ಳಿಯಲ್ಲಿ ತಯಾರಿಸಿದ ದೇವರ ವಿಗ್ರಹಗಳನ್ನು ಹಂಚುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಕಚೇರಿಗಳಲ್ಲಿ (BJP office) ಉಡುಗೊರೆಗಳನ್ನು ಹಂಚಲಾಗುತ್ತಿದ್ದು ಮಹಿಳೆಯರು ಸಾಲುಸಾಲಾಗಿ ಬಂದು ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 08, 2023 11:30 AM