ಕಾಫಿ ತೋಟದ ಕಾರ್ಮಿಕರನ್ನು ಅಟ್ಟಾಡಿಸಿದ ಗಜರಾಜ!

Updated on: Jan 11, 2026 | 8:24 AM

ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಕೊಡಗು ಭಾಗದಿಂದ ಬಂದಿರುವ ಒಂಟಿ ಸಲಗ ಕಾಫಿ ತೋಟದೊಳಗೆ ನುಗ್ಗಿ ಕಾರ್ಮಿಕರನ್ನು ಅಟ್ಟಾಡಿಸಿದೆ. ಕಾಡಾನೆ ಕಾಣುತ್ತಿದ್ದಂತೆ ಕಾರ್ಮಿಕರು ಕೂಗಾಡುತ್ತಾ ಜೀವ ಭಯದಿಂದ ಓಡಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಘೀಳಿಡುತ್ತ ಮನೆಗಳತ್ತ ಓಡಿದ್ದು, ಸಲಗ ಮನೆ ಬಾಗಿಲವರೆಗೂ ಹಿಂಬಾಲಿಸಿದೆ. ಕೊನೆಗೆ ಕಾರ್ಮಿಕರು ಮನೆಗಳೊಳಗೆ ಪ್ರವೇಶಿಸಿ ಜೀವ ಉಳಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ.

ಹಾಸನ, ಜನವರಿ 11: ಜಿಲ್ಲೆ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಕೊಡಗು ಭಾಗದಿಂದ ಬಂದಿರುವ ಒಂಟಿ ಸಲಗ ಕಾಫಿ ತೋಟದೊಳಗೆ ನುಗ್ಗಿ ಕಾರ್ಮಿಕರನ್ನು ಅಟ್ಟಾಡಿಸಿದೆ. ಕಾಡಾನೆ ಕಾಣುತ್ತಿದ್ದಂತೆ ಕಾರ್ಮಿಕರು ಕೂಗಾಡುತ್ತಾ ಜೀವ ಭಯದಿಂದ ಓಡಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ಘೀಳಿಡುತ್ತ ಮನೆಗಳತ್ತ ಓಡಿದ್ದು, ಸಲಗ ಮನೆ ಬಾಗಿಲವರೆಗೂ ಹಿಂಬಾಲಿಸಿದೆ. ಕೊನೆಗೆ ಕಾರ್ಮಿಕರು ಮನೆಗಳೊಳಗೆ ಪ್ರವೇಶಿಸಿ ಜೀವ ಉಳಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.