ಹಾಸನಾಂಬೆ ದರ್ಶನ ವೇಳೆ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ: ಭಕ್ತಿ ಮೆರೆದ ವ್ಯಕ್ತಿ
ಹಾಸನಾಂಬೆ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಮೈಸೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದ ತಮ್ಮ ಮಾಂಗಲ್ಯ ಸರವನ್ನು ಪ್ರಾಮಾಣಿಕ ಭಕ್ತರೊಬ್ಬರು ಮರಳಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ಚಿನ್ನದ ಸರ ಪತ್ತೆಯಾದ ನಂತರ, ಘೋಷಣೆ ಮೂಲಕ ಮಹಿಳೆಯನ್ನು ಸಂಪರ್ಕಿಸಿ, ಸರಿಯಾದ ಗುರುತು ದೃಢೀಕರಿಸಿ ಮರಳಿಸಲಾಯಿತು. ಈ ಘಟನೆ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.
ಹಾಸನ , ಅ.21: ಜಿಲ್ಲೆಯ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದಲ್ಲಿ ನಡೆದ ಭಕ್ತಿಯ ಮತ್ತು ಪ್ರಾಮಾಣಿಕತೆಯ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ದೇವಸ್ಥಾನದ ದರ್ಶನಕ್ಕೆ ಆಗಮಿಸಿದ್ದ ಮೈಸೂರಿನ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರು. ದೇವಸ್ಥಾನದ ಆವರಣದಲ್ಲಿ ಚಿನ್ನದ ಸರ ಪತ್ತೆಯಾದ ನಂತರ, ಇದನ್ನು ಸ್ಕೌಟ್ ಅಂಡ್ ಗೈಡ್ ಮಕ್ಕಳು ಮತ್ತು ಪ್ರಾಮಾಣಿಕ ಭಕ್ತರೊಬ್ಬರು ದೇವಸ್ಥಾನದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸರ ಪತ್ತೆಯಾದ ನಂತರ, ದೇವಸ್ಥಾನದ ಆಡಳಿತ ಮಂಡಳಿಯು ಈ ಬಗ್ಗೆ ಮೈಕದಲ್ಲಿ ಘೋಷಣೆ ಮಾಡಿದ್ದಾರೆ. ಘೋಷಣೆಯನ್ನು ಕೇಳಿ ಬಂದ ಮಹಿಳೆ, ಕಳೆದುಹೋದ ಸರದ ನಿಖರವಾದ ಗುರುತನ್ನು ವಿವರವಾಗಿ ವಿವರಿಸಿದ್ದಾರೆ. ಅವರ ಹೇಳಿಕೆ ಪ್ರಕಾರ ದೇವಸ್ಥಾನದ ಮುಂಭಾಗದಲ್ಲಿ ಚಿನ್ನದ ಸರವನ್ನು ಮಹಿಳೆಗೆ ಮರಳಿಸಲಾಯಿತು. ಈ ಸಂದರ್ಭದಲ್ಲಿ ಸರವನ್ನು ಪಡೆದ ನಂತರ ಎಚ್ಚರದಿಂದ ಇರುವಂತೆ ಹೇಳಿದ್ದಾರೆ. ಇನ್ನು ಕಳೆದುಹೋದ ಆಭರಣವನ್ನು ಪ್ರಾಮಾಣಿಕವಾಗಿ ಮರಳಿಸಿದ ಭಕ್ತರ ನಡೆಯನ್ನು ಶ್ಲಾಘನೆ ಮಾಡಲಾಗಿತು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
